Publish Date: Mon, 19 Feb 2024 (15:03 IST)
Updated Date: Mon, 19 Feb 2024 (14:21 IST)
ಬೆಂಗಳೂರು-ಬೆಂಗಳೂರಿನಲ್ಲಿ ಯುವಕರು ಅಪಾಯಕಾರಿ ವೀಲ್ಹಿಂಗ್ ಮಾಡಿ ಸಾರ್ವಜನಿಕರಿಗೆ ಉಪದ್ರವ ಕೊಟ್ಟಿದ್ದಾರೆ.ಬೆಂಗಳೂರಿನ ಬಾಬುಸಪಾಳ್ಯದ ಟಿನ್ ಫಾಕ್ಟರಿ ರಿಂಗ್ ರೋಡ್ ನಲ್ಲಿ ಘಟನೆ ನಡೆದಿದೆ.ದ್ವಿಚಕ್ರ ವಾಹನದ ಮೇಲೆ ನಿಂತು ಯುವಕ ವೀಲ್ಹಿಂಗ್ ಮಾಡಿದ್ದಾನೆ.ದ್ವಿಚಕ್ರ ವಾಹನದ ಹಿಂಬದಿಯಲ್ಲಿ ನಂಬರ್ ಪ್ಲೇಟ್ ಇಲ್ಲ.ನಡುರಸ್ತೆಯಲ್ಲಿ ಅಪಾಯಕಾರಿ ವ್ಹೀಲಿಂಗ್ ಮಾಡಿರುವುದನ್ನ ಸಾರ್ವಜನಿಕರು ಸೆರೆಹಿಡಿದಿದ್ದಾರೆ.
ಅಲ್ಲದೇ ವೀಲ್ಹಿಂಗ್ ವೀಡಿಯೋ ಪೊಲೀಸರಿಗೆ ಟ್ಯಾಗ್ ಮಾಡಿ ಕ್ರಮಕ್ಕೆ ಆಗ್ರಹಿಸಲಾಗಿದ್ದು, ಈತನ ವಿರುದ್ಧ ಕ್ರಮಕೈಗೊಳ್ಳಿ ಅಂಥ ಸಾರ್ವಜನಿಕರು ಮನವಿ ಮಾಡಿದ್ದಾರೆ.