Select Your Language

Notifications

webdunia
webdunia
webdunia
webdunia

ಡೇಂಜರ್ : ಈ ನದಿ ತೀರಕ್ಕೆ ಹೋಗಲೇಬೇಡಿ

ಡೇಂಜರ್ : ಈ ನದಿ ತೀರಕ್ಕೆ ಹೋಗಲೇಬೇಡಿ
ಕಲಬುರಗಿ , ಶನಿವಾರ, 28 ಸೆಪ್ಟಂಬರ್ 2019 (19:08 IST)
ಮಹಾರಾಷ್ಟ್ರ ರಾಜ್ಯದ ಉಜನಿ ಹಾಗೂ ವಿರ್ ಜಲಾಶಯಗಳಿಂದ ಭೀಮಾ ನದಿಗೆ ಲಕ್ಷ ಕ್ಯುಸೆಕ್ ನೀರು ಹರಿಬಿಡಲಾಗಿದೆ.

(ಸೊನ್ನ ಬ್ಯಾರೇಜ್, ಗಾಣಗಾಪೂರ ಬ್ಯಾರೇಜ್, ಘತ್ತರಗಾ ಬ್ಯಾರೇಜ್) 1.00 ಲಕ್ಷ ಕ್ಯೂಸೆಕ್ಸ ನೀರು ಹರಿ ಬಿಡಲಾಗುತ್ತಿದೆ.

ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಭೀಮಾ ನದಿ ಪಾತ್ರದ ಗ್ರಾಮಗಳಲ್ಲಿನ ಸಾರ್ವಜನಿಕರು ನದಿ ತೀರಕ್ಕೆ ಹೋಗಲೇಬಾರದು. ಜಾನುವಾರುಗಳಿಗೆ ನದಿ ತೀರದಲ್ಲಿ ಬಿಡಬಾರದೆಂದು ಹೆಚ್ಚುವರಿ ಜಿಲ್ಲಾಧಿಕಾರಿ ಬಿ. ಶರಣಪ್ಪ ಸತ್ಯಂಪೇಟ್ ಹೇಳಿದ್ದಾರೆ.

ನೀರಿನ ಒಳಹರಿವಿನ ರಭಸದಿಂದ ಭೀಮಾ ನದಿಯ ತೀರದ ಅಕ್ಕಪಕ್ಕದ ಗ್ರಾಮಗಳ ಮಾನವ ಹಾಗೂ ಜಾನುವಾರುಗಳಿಗೆ ಧಕ್ಕೆ ಆಗುವ ಸಾಧ್ಯತೆ ಇದೆ. ಸಾರ್ವಜನಿಕರು ಭೀಮಾ ನದಿಯ ತೀರಕ್ಕೆ ಹೋಗದಂತೆ ಹಾಗೂ ಜಾನುವಾರುಗಳನ್ನು ನದಿ ತೀರದಲ್ಲಿ ಬಿಡದಂತೆ ಮುನ್ನೆಚ್ಚರಿಕೆ ವಹಿಸಬೇಕೆಂದು ಹೇಳಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ರಾಕಿಂಗ್ ಸ್ಟಾರ ಯಶ್ ವಿರುದ್ಧ ಕೇಸ್ ಹಾಕಿದ ನಟೋರಿಯಸ್ ರೌಡಿ