Publish Date: Sat, 19 Oct 2019 (15:55 IST)
Updated Date: Sat, 19 Oct 2019 (15:56 IST)
ಮಳೆರಾಯನ ಅಬ್ಬರಕ್ಕೆ ಬಡಪಾಯಿಗಳ ಮನೆಗಳು ಹಾನಿಗೊಳಗಾಗಿರೋ ಘಟನೆ ನಡೆದಿದೆ.
ಮಂಡ್ಯದ ಕೃಷ್ಣಾಪುರ ಗ್ರಾಮದಲ್ಲಿ ಕೆಲವು ದಿನಗಳಿಂದ ಎಡಬಿಡದೆ ಮಳೆ ಸುರಿಯುತ್ತಿರೋ ಹಿನ್ನೆಲೆಯಲ್ಲಿ
ಬಡವರ ಮನೆಗಳು ನೆಲಸಮವಾಗಿವೆ. ಬಡಪಾಯಿಗಳು ಭಿಕ್ಷಾಟನೆ ಮಾಡಿ ಜೀವನ ಸಾಗಿಸುತ್ತಿದ್ದ ಕಾವೇರಮ್ಮ ಲೇಟ್ ಶಿವಣ್ಣ ಮತ್ತು ನರಸಿಂಹಯ್ಯ ಎಂಬುವರ ಮನೆಗಳು ನೆಲಕ್ಕೆ ಉರುಳಿವೆ.
ತಡ ರಾತ್ರಿ ಸುರಿದ ಭಾರೀ ಮಳೆಯಿಂದ ಇವರಿಬ್ಬರ ಮನೆಗಳು ನೆಲಸಮಗೊಂಡಿವೆ.
ಮೂಲತಃ ಭಿಕ್ಷಾಟನೆ ಕುಲಕಸುಬು ಹೊಂದಿರೋ ಇವರ ಮನೆಗಳು ಹಾನಿಗೆ ಒಳಗಾಗಿರೋದ್ರಿಂದ ಚಿಂತಾಕ್ರಾಂತರಾಗಿದ್ದಾರೆ.