ದಲಿತರಿಗೆ ಕಾಂಗ್ರೆಸ್​​ನಿಂದ ಮಹಾ ಮೋಸ ಆಗಿದೆ

Webdunia
ಬುಧವಾರ, 2 ಆಗಸ್ಟ್ 2023 (17:54 IST)
ದಲಿತ ಸಮುದಾಯಕ್ಕೆ ಮೀಸಲಿಟ್ಟ ಹಣ ಗ್ಯಾರಂಟಿಗಳಿಗೆ ಬಳಕೆ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ವಿಧಾನ ಪರಿಷತ್ ಸದಸ್ಯ ಚಲವಾದಿ ನಾರಾಯಣಸ್ವಾಮಿ ಪ್ರತಿಕ್ರಿಯಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಒಬ್ಬ ದಲಿತ ವಿರೋಧಿ. ಅಧಿಕಾರಕ್ಕೆ ಬರಲು ಕಾಂಗ್ರೆಸ್ 5 ಗ್ಯಾರಂಟಿಗಳನ್ನು ಕೊಡ್ತು. ಗ್ಯಾರಂಟಿಗಳಿಗೆ ಹಣ ಎಲ್ಲಿಂದ ಬರುತ್ತೆ ಅಂದಾಗ, ಬಿಜೆಪಿಯ 40 ಕಮಿಷನ್ ಬೇಕಾದಷ್ಟು ಇದೆ.ಅದರಲ್ಲಿ ನಾವು ಗ್ಯಾರಂಟಿಗಳನ್ನು ಮಾಡ್ರೀವಿ ಅಂದಿದ್ರಿ. ಆದರೆ ದಲಿತರ ಹಣಕ್ಕೆ ಯಾಕೆ ನೀವು ಕನ್ನ ಹಾಕ್ತಿದ್ದೀರಿ ಎಂದು ಪ್ರಶ್ನಿಸಿದ್ರು. ಇಂತಹ ಸುಳ್ಳು ಹೇಳಿ ಯಾವ ಕಾರಣಕ್ಕೆ ಸರ್ಕಾರ ಮಾಡಬೇಕಿತ್ತು. ನಮಗೆ ಬೇಕಿರೋದು ಶಿಕ್ಷಣ, ಉದ್ಯೋಗ, ಆರ್ಥಿಕ ಭದ್ರತೆ ಮತ್ತೆ ಆರೋಗ್ಯ ರಕ್ಷಣೆ ಇರಬೇಕು. ನಿಮ್ಮ ಬಿಟ್ಟಿ ಭಾಗ್ಯ ನಮಗೆ ಬೇಕಾಗಿಲ್ಲ.
 
ದಲಿತರ ಹೆಸರೇಳಿ, ಬೇರೆ ಬೇರೆ ಇಲಾಖೆಗಳಿಗೆ ಹಣ ಕೊಟ್ಟಿದ್ದೀರಿ. ಕೆರೆ ನೀರನ್ನು ಕೆರೆಗೆ ಚೆಲ್ಲೋಕೆ ಒಬ್ಬ ಸಿಎಂ ಬೇಕಾ ಎಂದು ವಾಗ್ದಾಳಿ ನಡೆಸಿದ್ರು. ದಲಿತರಿಗೆ ಕಾಂಗ್ರೆಸ್​​ನಿಂದ ಮಹಾ ಮೋಸ ಆಗಿದೆ. ಕಾಂಗ್ರೆಸ್ ಅನ್ನೋದೇ ಮಹಾ ವಂಚನೆ. ದಲಿತ ಸಮುದಾಯವನ್ನು ಸಂಹಾರ ಮಾಡಲು ಸಿದ್ದರಾಮಯ್ಯ ಹೊರಟಿದ್ದಾರೆ ಎಂದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಲಂಚ ಸ್ವೀಕರ: ರೆಡ್‌ಹ್ಯಾಂಡ್‌ ಆಗಿ ಲಾಕ್ ಆದ ಮೀನುಗಾರಿಕೆ ಇಲಾಖೆಯ ಸೂಪರ್‌ವೈಸರ್‌

ಹಾವೇರಿಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆ: ಸಿಎಂ ಸಿದ್ದರಾಮಯ್ಯ

ತುಂಡಾಗಿ ಬಿದ್ದ ವಿದ್ಯುತ್ ತಂತಿ, 900ಕ್ಕೂ ಅಧಿಕ ಅಡಕೆ ಸಸಿಗಳು ನಾಶ

2025ರಲ್ಲಿ ಕರ್ನಾಟಕದಲ್ಲಿ ಅತಿ ಹೆಚ್ಚು ಅಂಗಾಂಗ ದಾನ, ರಾಷ್ಟ್ರ ಮಟ್ಟದಲ್ಲಿ ಮೂರನೇ ಸ್ಥಾನ

ಸಿಎಂ ಕುರ್ಚಿ ಗುದ್ದಾಟದ ನಡುವೆ ಜನರ ಆಶೀರ್ವಾದವಿರಬೇಕೆಂದ ಸಿದ್ದರಾಮಯ್ಯ, ಭಾರೀ ಕುತೂಹಲ

ಮುಂದಿನ ಸುದ್ದಿ
Show comments