Select Your Language

Notifications

webdunia
webdunia
webdunia
webdunia

ದಲಿತ ವಿದ್ಯಾರ್ಥಿನಿ ಆತ್ಮಹತ್ಯೆ: ಸಾವಿನ ಹಿಂದೆ ಮುಸ್ಲಿಂ ಯುವಕನ ಕಿರುಕುಳ ಆರೋಪ

ದಲಿತ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣ

Sampriya

ಹಾವೇರಿ , ಶನಿವಾರ, 19 ಏಪ್ರಿಲ್ 2025 (19:55 IST)
ಹಾವೇರಿ: ಇಲ್ಲಿನ ದಲಿತ ವಿದ್ಯಾರ್ಥಿನಿ ಸಾವು ಪ್ರಕರಣದಲ್ಲಿ ಇದೀಗ ಮುಸ್ಲಿಂ ಯುವಕನ ಮೇಲೆ ಆರೋಪ ಕೇಳಿ ಬಂದಿದೆ.   ಮುಸ್ಲಿಂ ಯುವಕನ ಕಿರುಕುಳಕ್ಕೆ ಬೇಸತ್ತು ಯುವತಿ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆರೋಪಿಸಿದ್ದಾರೆ.

ಈ ಸಂಬಂಧ ನದಾಫ್ ನನ್ನು ಬಂಧಿಸುವಂತೆ ಆಗ್ರಹ ವ್ಯಕ್ತವಾಗಿದೆ.

ಬಿಸಿಎ ಓದುತ್ತಿದ್ದ 22 ವರ್ಷದ ಶಿಲ್ಪಾ ಶಿಗ್ಗಾಂವಿಯ ನವೀನ್ ಎಂಬಾತನನ್ನು ಪ್ರೀತಿಸುತ್ತಿದ್ದಳು. ಇನ್ನು ನವೀನ್ ಆರೋಪಿ ರಂಜಾನ್ ನದಾಫ್​ನ ಫರ್ನಿಚರ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದನು.

ನವೀನ್ ವಿರುದ್ಧ ಕಳ್ಳತನ ಆರೋಪ ಮಾಡಿದ್ದ ನದಾಫ್, ನವೀನ್ ಮೊಬೈಲ್ ಅನ್ನು ಕಸಿದುಕೊಂಡಿದ್ದನು. ನಂತರ ರಂಜಾನ್​ ನದಾಫ್​, ನವೀನ್ ಮತ್ತು ಶಿಲ್ಪಾರ ಚಾಟ್​ ಮೆಸೆಜ್​ಗಳನ್ನು ನೋಡಿದ್ದು ಶಿಲ್ಪಾ ಮೊಬೈಲ್ ನಂಬರ್ ತೆಗೆದುಕೊಂಡು ಕಿರುಕುಳ ನೀಡಲು ಪ್ರಾರಂಭಿಸಿದ್ದಾನೆ.

ಹೀಗಾಗಿ ಶಿಲ್ಪಾ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಹೇಳಲಾಗುತ್ತಿದೆ. ಕಳೆದ ವಾರ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಬೆಳಗಾವಿಯ ಮಾರ್ಕೆಟ್​ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

Viral Video:ರನ್ಯಾ ರಾವ್ ಪ್ಲ್ಯಾನ್‌ಗಿಂತಲೂ ಖತರ್ನಾಕ್ ಆಗಿ ಮದ್ಯದ ಬಾಟಲಿ ಎಗರಿಸಿದ ಮಹಿಳೆ, ನೋಡಿದ್ರೆ ಶಾಕ್ ಆಗ್ತೀರಾ