Publish Date: Sun, 13 Nov 2022 (10:20 IST)
Updated Date: Sun, 13 Nov 2022 (11:23 IST)
ಗದಗ : ಪ್ರೀತಿ ವಿಚಾರಕ್ಕಾಗಿಯೇ ಗ್ರಾಮದ ಆ ಕುಟುಂಬದ ಮನೆಗಳು ಧ್ವಂಸವಾದವು. ಏಕಾಏಕಿ ಮನೆ ಖಾಲಿ ಮಾಡಿಸಿದ್ರು. ಇಡೀ ಸಮುದಾಯವೇ ಆ ಒಂದು ಕುಟುಂಬವನ್ನು ಕುಲದಿಂದ ಬಹಿಷ್ಕಾರ ಹಾಕಿದೆ.
ದಿಕ್ಕು ಕಾಣದೇ ಕುಟುಂಬ ಬೀದಿಗೆ ಬಂದಿದೆ. ನಾವು ಸವರ್ಣಿಯರು ದಲಿತರನ್ನು ಬಹಿಷ್ಕಾರ ಹಾಕುವುದನ್ನು ನೋಡಿದ್ದೆವೆ, ಕೇಳಿದ್ದೇವೆ. ಆದರೆ ಇಲ್ಲಿ ದಲಿತರೇ ದಲಿತರನ್ನ ಬಹಿಷ್ಕಾರ ಹಾಕಿದ್ದಾರೆ. ಮನನೊಂದು ಕುಟುಂಬದ 11 ಜನ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದಾರೆ.
ಹೌದು. ಗದಗ ಜಿಲ್ಲೆಯ ನರಗುಂದ ತಾಲೂಕಿನ ಸುರಕೋಡ ಗ್ರಾಮದಲ್ಲಿ ಎಸ್. ಸಾಬಣ್ಣ ಮಾದರ ಎಂಬ ಕುಟುಂಬಕ್ಕೆ ಈಗ ಬಹಿಷ್ಕಾರ ಹಾಕಲಾಗಿದೆ. ಇವರ ಮಗ ಶಿವಾನಂದ ಮಾದರ ಎಂಬಾತ ಅದೇ ಜಾತಿಯ ಯುವತಿಯೊಬ್ಬಳನ್ನು ಪ್ರೀತಿಸಿ ಮದುವೆಯಾಗಿದ್ದರು.
ಯುವತಿ ಕುಟುಂಬಸ್ಥರು ಇವರ ಮೇಲೆ ಕತ್ತಿ ಮಸಿಯಲಾರಂಬಿಸಿದ್ರು. 2009 ರಲ್ಲಿ ಊರು ತೊರೆದು 14 ವರ್ಷ ವನವಾಸ ಮುಗಿಸಿ ಈಗ ಊರಿಗೆ ಬಂದಿದ್ದಾರೆ. ಆದರೂ ಇವರ ಮೇಲಿನ ಸಿಟ್ಟು, ಕೋಪ ಇನ್ನೂ ತನ್ನಗಾಗಿಲ್ಲ. ದಲಿತ ಸಮಾಜದಿಂದ ನಮ್ಮನ್ನು ಬಹಿಷ್ಕಾರ ಹಾಕಿದ್ದಾರೆ.