Select Your Language

Notifications

webdunia
webdunia
webdunia
webdunia

ಇಂಧನ ದರದ ಸ್ಥಿರತೆ ಮುಂದುವರಿಕೆ; ಪ್ರಮುಖ ನಗರಗಳಲ್ಲಿ ಬೆಲೆಯೆಷ್ಟು?

ಇಂಧನ ದರದ ಸ್ಥಿರತೆ ಮುಂದುವರಿಕೆ; ಪ್ರಮುಖ ನಗರಗಳಲ್ಲಿ ಬೆಲೆಯೆಷ್ಟು?
bangalore , ಬುಧವಾರ, 15 ಡಿಸೆಂಬರ್ 2021 (14:18 IST)
ದೇಶದ ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ದೇಶದಲ್ಲಿ ಇಂದು (ಡಿಸೆಂಬರ್ 15, ಬುಧವಾರ) ಸಹ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಒಂದು ತಿಂಗಳ ನಂತರವೂ ಇಂಧನ ದರ ಸ್ಥಿರವಾಗಿದೆ. ಕಳೆದ ತಿಂಗಳ ದೀಪಾವಳಿ ಹಬ್ಬದ ವೇಳೆ ಕೇಂದ್ರ ಹಾಗೂ ವಿವಿಧ ರಾಜ್ಯಗಳಲ್ಲಿ ಅಬಕಾರಿ ಸುಂಕ, ಸೆಸ್, ವ್ಯಾಟ್ ಇಳಿಕೆ ಮಾಡಿದ ಬಳಿಕ ಭಾರತದಲ್ಲಿ ಇಂಧನ ದರ ಭಾರಿ ಇಳಿಕೆ ಕಂಡಿತ್ತು.
ಆದರೆ ಕೆಲವೇ ದಿನಗಳ ಹಿಂದೆ ದೆಹಲಿಯ ಆಪ್​ ಸರ್ಕಾರ ಪೆಟ್ರೋಲ್​ ಮೇಲಿನ ವ್ಯಾಟ್ (ಮೌಲ್ಯವರ್ಧಿತ ತೆರಿಗೆ) ನ್ನು ಶೇ.30ರಿಂದ ಶೇ.19.40ಕ್ಕೆ ಇಳಿಸಿದೆ. ಹಾಗಾಗಿ ಅಲ್ಲಿ ಪೆಟ್ರೋಲ್​ ಬೆಲೆ ಪ್ರತಿ ಲೀಟರ್​ಗೆ 8 ರೂ. ಕಡಿಮೆಯಾಗಿದೆ. ಆದರೆ ಡೀಸೆಲ್​ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ಬುಧವಾರದಂದು ಪೆಟ್ರೋಲ್, ಡೀಸೆಲ್ ದರದಲ್ಲಿ ಯಾವುದೇ ಪರಿಷ್ಕರಣೆ ಮಾಡಿಲ್ಲ. ಡೀಸೆಲ್ ಬೆಲೆ ಏರಿಕೆಯಿಂದ ಸರಕು ಸಾಗಣೆ ವ್ಯತ್ಯಯ, ಅಗತ್ಯ ವಸ್ತುಗಳ ಬೆಲೆ ಏರಿಕೆಗೂ ಕಾರಣವಾಗಿತ್ತು. ಆದರೆ, ಅನೇಕ ನಗರಗಳಲ್ಲಿ ಇಂಧನ ದರ ತಗ್ಗಿದೆ. ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲೂ ತೆರಿಗೆ ತಗ್ಗಿಸಲಾಗಿದೆ. ತಮಿಳುನಾಡು, ಪುದುಚೇರಿ ರಾಜ್ಯಗಳಲ್ಲಿ ಬಜೆಟ್ ವೇಳೆ ತಗ್ಗಿಸಿರುವುದರಿಂದ ಮತ್ತೊಮ್ಮೆ ವ್ಯಾಟ್ ತಗ್ಗಿಸುವುದಿಲ್ಲ ಎಂದು ಅಲ್ಲಿನ ಸರ್ಕಾರ ಹೇಳಿವೆ.
ದೀಪಾವಳಿ ಸಂದರ್ಭದಲ್ಲಿ ಕೊಂಚ ಪ್ರಮಾಣದಲ್ಲಿ ಇಳಿಕೆಯಾದ ಅನಂತರ ದೇಶದಲ್ಲಿ ಇಂಧನ ದರದಲ್ಲಿ ಯಾವುದೇ ಏರಿಳಿತ ಕಂಡು ಬಂದಿಲ್ಲ. ಪ್ರಮುಖ ನಗರಗಳಲ್ಲಿ ಕಳೆದ ಐದು ದಿನಗಳಿಂದ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಎಷ್ಟಿದೆ ಎಂಬ ಮಾಹಿತಿ ಈ ಕೆಳಗಿನಂತಿದೆ ಪರಿಶೀಲಿಸಿ.
ಬೆಂಗಳೂರಿನಲ್ಲಿ 5 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)
ಡಿ. 15: 100.58 ರೂ.
ಡಿ. 14: 100.58 ರೂ.
ಡಿ. 13: 100.58 ರೂ.
ಡಿ. 12: 100.58 ರೂ.
ಡಿ. 11: 100.58 ರೂ.
ಡೀಸೆಲ್ (ಪ್ರತಿ ಲೀಟರ್)
ಡಿ. 15: 85.01 ರೂ.
ಡಿ. 14: 85.01 ರೂ.
ಡಿ. 13: 85.01 ರೂ.
ಡಿ. 12: 85.01 ರೂ.
ಡಿ. 11: 85.01 ರೂ.
ದೆಹಲಿಯಲ್ಲಿ 5 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)
ಡಿ. 15: 95.41 ರೂ.
ಡಿ. 14: 95.41 ರೂ.
ಡಿ. 13: 95.41 ರೂ.
ಡಿ. 12: 95.41 ರೂ.
ಡಿ. 11: 95.41 ರೂ.
ಡೀಸೆಲ್ (ಪ್ರತಿ ಲೀಟರ್)
ಡಿ. 15: 86.67 ರೂ.
ಡಿ. 14: 86.67 ರೂ.
ಡಿ. 13: 86.67 ರೂ.
ಡಿ. 12: 86.67 ರೂ.
ಡಿ. 11: 86.67 ರೂ.
ಮುಂಬೈನಲ್ಲಿ 5 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)
ಡಿ. 15: 109.98 ರೂ.
ಡಿ. 14: 109.98 ರೂ.
ಡಿ. 13: 109.98 ರೂ.
ಡಿ. 12: 109.98 ರೂ.
ಡಿ. 11: 109.98 ರೂ.
ಡೀಸೆಲ್ (ಪ್ರತಿ ಲೀಟರ್)
ಡಿ. 15: 94.14 ರೂ.
ಡಿ. 14: 94.14 ರೂ.
ಡಿ. 13: 94.14 ರೂ.
ಡಿ. 12: 94.14 ರೂ.
ಡಿ. 11: 94.14 ರೂ.
ಚೆನ್ನೈನಲ್ಲಿ 5 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)
ಡಿ. 15: 101.40 ರೂ.
ಡಿ. 14: 101.40 ರೂ.
ಡಿ. 13: 101.40 ರೂ.
ಡಿ. 12: 101.40 ರೂ.
ಡಿ. 11: 101.40 ರೂ.
ಡೀಸೆಲ್ (ಪ್ರತಿ ಲೀಟರ್)
ಡಿ. 15: 91.43 ರೂ.
ಡಿ. 14: 91.43 ರೂ.
ಡಿ. 13: 91.43 ರೂ.
ಡಿ. 12: 91.43 ರೂ.
ಡಿ. 11: 91.43 ರೂ.
ಹೈದ್ರಾಬಾದ್‌ನಲ್ಲಿ 5 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)
ಡಿ. 15: 108.20 ರೂ.
ಡಿ. 14: 108.20 ರೂ.
ಡಿ. 13: 108.20 ರೂ.
ಡಿ. 12: 108.20 ರೂ.
ಡಿ. 11: 108.20 ರೂ.
ಡೀಸೆಲ್ ದರ (ಪ್ರತಿ ಲೀಟರ್)
ಡಿ. 15: 94.62 ರೂ.
ಡಿ. 14: 94.62 ರೂ.
ಡಿ. 13: 94.62 ರೂ.
ಡಿ. 12: 94.62 ರೂ.
ಡಿ. 11: 94.62 ರೂ.
ಪ್ರತಿದಿನ ಬೆಳಗ್ಗೆ 6 ಗಂಟೆಗೆ ಇಂಧನ ದರ ಪರಿಷ್ಕರಣೆ
ಇದೀಗ ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಮತ್ತೆ ಏರಿಕೆ ಕಾಣುತ್ತಿದೆ. ಆದರೂ, ರಾಷ್ಟ್ರಾದ್ಯಂತ ಮತ್ತೆ ಪೆಟ್ರೋಲ್​- ಡೀಸೆಲ್​ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಇಂಧನ ದರ ಕಡಿಮೆಯಾದರೆ ವಾಹನ ಸವಾರರಿಗೆ ಮತ್ತಷ್ಟು ಭಾರ ಕಡಿಮೆಯಾಗಲಿದೆ. ಕಳೆದ ವಾರ ಯುಎಸ್​ನ ಬೆಂಚ್​​ಮಾರ್ಕ್​ ಡಬ್ಲ್ಯೂಟಿಐ ಕಚ್ಚಾತೈಲದ ಬೆಲೆ ಪ್ರತಿ ಬ್ಯಾರಲ್​​ಗೆ 70 ಡಾಲರ್​ಗಳಷ್ಟು ಕುಸಿದಿತ್ತು. ಹಾಗೇ, ಬ್ರೆಂಟ್​ ಕಚ್ಚಾತೈಲದ ದರ ಪ್ರತಿ ಬ್ಯಾರೆಲ್​​ಗೆ 72 ರೂ. ಕಡಿಮೆಯಾಗಿತ್ತು. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ.

Share this Story:

Follow Webdunia kannada

ಮುಂದಿನ ಸುದ್ದಿ

ಐದು ಗುಂಟೆಗಿಂತ ಕಡಿಮೆ ಇರುವ ಕೃಷಿಭೂಮಿ ಮಾರುವಂತಿಲ್ಲ