Webdunia - Bharat's app for daily news and videos

Install App

ಹೋಟೆಲ್ ನಲ್ಲಿ ಸಿಲಿಂಡರ್ ಸ್ಪೋಟ

Webdunia
ಸೋಮವಾರ, 3 ಜನವರಿ 2022 (15:42 IST)
ಹೊಟೇಲ್‍ನಲ್ಲಿ ಗ್ಯಾಸ್ ಸಿಲಿಂಡರ್ನಿಂದ ಅನಿಲ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ವ್ಯಕ್ತಿಯೊಬ್ಬರು ಗಂಭೀರ ಗಾಯಗೊಂಡಿರುವ ಘಟನೆ ಇಂದು ಬೆಳಗ್ಗೆ ಚಂದ್ರಾಲೇಔಟ್ ಪೊಲೀಸ್ ಠಾಣಾ ವಾಪ್ತಿಯಲ್ಲಿ ನಡೆದಿದೆ.
ಮಹೇಶ್(28) ಸುಟ್ಟ ಗಾಯಗಳಿಂದಾಗಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
 
ಚಂದ್ರಾಲೇಔಟ್, 2ನೆ ಮುಖ್ಯರಸ್ತೆ, ಗಣಪತಿ ಸರ್ಕಲ್ ಬಳಿ ಸಂತೃಪ್ತಿ ಉತ್ತರ ಕರ್ನಾಟಕ ಜವಾರಿ ಊಟದ ಮನೆ ಎಂಬ ಹೊಟೇಲ್‍ನಲ್ಲಿ ರಾತ್ರಿ ಎಲ್ಲಾ ಕೆಲಸ ಮುಗಿಸಿ ಹೊಟೇಲ್‍ಗೆ ಬೀಗ ಹಾಕಿ ಕೆಲಸಗಾರರು ಹೋಗಿದ್ದಾರೆ. ಆ ವೇಳೆ ಸಿಲಿಂಡರ್‍ನಿಂದ ಅನಿಲ ಸೋರಿಕೆಯಾಗಿಬಹುದು. ಇಂದು ಬೆಳಗ್ಗೆ 7 ಗಂಟೆ ಸುಮಾರಿನಲ್ಲಿ ಮಹೇಶ್ ಎಂಬುವರು ಅಡುಗೆ ಮಾಡಲು ಹೊಟೇಲ್‍ಗೆ ಬಂದಿದ್ದಾರೆ.
 
ಆ ವೇಳೆ ಅನಿಲ ಸೋರಿಕೆಯಾಗಿರುವುದು ಇವರ ಗಮನಕ್ಕೆ ಬಂದಿಲ್ಲ. ಸ್ಟೌವ್ ಆನ್ ಮಾಡುತ್ತಿದ್ದಂತೆ ಬೆಂಕಿ ಹೊತ್ತಿಕೊಂಡಿದೆ. ಮಹೇಶ್ ಅವರಿಗೆ ಬೆಂಕಿ ತಗುಲಿದ ಪರಿಣಾಮ ಚೀರಿಕೊಂಡು ಹೊರಗೆ ಬಂದಿದ್ದಾರೆ. ತಕ್ಷಣ ಅಕ್ಕಪಕ್ಕದವರು ಅಗ್ನಿ ಶಾಮಕ ದಳಕ್ಕೆ ವಿಷಯ ತಿಳಿಸಿ ಬೆಂಕಿ ಆರಿಸಲು ಯತ್ನಿಸಿದ್ದಾರೆ. ಅಗ್ನಿ ಶಾಮಕ ಸಿಬ್ಬಂದಿ ವಾಹನದೊಂದಿಗೆ ಆಗಮಿಸಿ ಬೆಂಕಿಯನ್ನು ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮಗುವಿಗೆ ಸಿರಪ್ ನೀಡುವ ವಿಚಾರದಲ್ಲಿ ದಂಪತಿ ನಡುವೆ ಜಗಳ, ಅಂತ್ಯವಾಗಿದ್ದು ಒಬ್ಬರ ಸಾವಿನಲ್ಲಿ

ಮಹಿಳೆಯರು ದೇಶದ ನಿಜವಾದ ಶಕ್ತಿ: ರಾಹುಲ್ ಗಾಂಧಿ

ಹೋಂ ಸ್ಟೇಗೆ ಎಂಜಾಯ್ ಮಾಡಲು ಹೋಗಿದ್ದ ಪ್ರವಾಸಿಗ ಕಾಡಾನೆ ದಾಳಿಗೆ ಬಲಿ

ರೇಪ್ ಕೇಸ್ ಮುಚ್ಚಿ ಹಾಕಲು ಪಂಜಾಬ್ ಸಿಎಂ ಪತ್ನಿ ಲಂಚದ ಬೇಡಿಕೆ, ತನಿಖೆಗೆ ನೋಟಿಸ್ ಜಾರಿ

ಆಟೋದಲ್ಲಿ ಫ್ರೀ ಆಗಿ ಕರೆದೊಯ್ಯಲಿಲ್ಲ ಎಂದು ಚಾಲಕನ ಮೇಲೆ ಇದೆಂಥಾ ಅನ್ಯಾಯವೆಸಗಿದ ಪೊಲೀಸ್ ಅಧಿಕಾರಿ Video

ಮುಂದಿನ ಸುದ್ದಿ
Show comments