Select Your Language

Notifications

webdunia
webdunia
webdunia
webdunia

100ರ ಸನಿಹದತ್ತ ಟೊಮೆಟೊ ದರ, ತರಕಾರಿ ಬೆಲೆ ಕೇಳಿ ಗ್ರಾಹಕರು ಶಾಕ್

100ರ ಸನಿಹದತ್ತ ಟೊಮೆಟೊ ದರ, ತರಕಾರಿ ಬೆಲೆ ಕೇಳಿ ಗ್ರಾಹಕರು ಶಾಕ್

Sampriya

ಬೆಂಗಳೂರು , ಬುಧವಾರ, 9 ಅಕ್ಟೋಬರ್ 2024 (15:24 IST)
ಬೆಂಗಳೂರು: ನವರಾತ್ರಿ ಸಂಭ್ರಮಾಚರಣೆ ಜತೆಗೆ ಟೊಮೆಮೊ ಬೆಲೆಯಲ್ಲಿ ದಿಢೀರಬೆ  ಏರಿಕೆಯಾಗಿದ್ದು, ಇದೀಗ ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದೆ. ಕಳೆದ ಕೆಲ ದಿನಗಳಿಂದ ದಿನನಿತ್ಯ ಬಳಸುವ ವಸ್ತುಗಳ ಬೆಲೆ ಏರಿಕೆಯಿಂದಾಗಿ ಗ್ರಾಹಕರು ಕಂಗೆಟ್ಟಿದ್ದಾರೆ. ಅಗತ್ಯ ತರಕಾರಿಗಳಾದ ಈರುಳ್ಳಿ, ಬೆಳ್ಳುಳ್ಳಿ ದರ ಗಗನ ಸಖಿಯಾಗಿದ್ದು, ಈ ಸಾಲಿಗೆ ಟೊಮೆಟೊ ಇದೀಗ ಸೇರ್ಪಡೆಯಾಗಿದೆ.

ಕಳೆದ ಕೆಲ ದಿನಗಳಿಂದ ಈರುಳ್ಳಿ, ಬೆಳ್ಳುಳ್ಳಿ ಬೆಲೆಗೆ ಜನರು ಶಾಕ್ ಆಗಿದ್ದಾರೆ. ಈಗ ಬೆಳ್ಳುಳ್ಳಿ ಕೆಜಿಗೆ ₹400 ದಾಟಿದ್ರೆ ಈರುಳ್ಳಿ ₹100 ಸನಿಹಕ್ಕೆ ಬಂದಿದೆ. ಈ ನಡುವೆ ಟೊಮೆಟೊ ಕೂಡ ಇದೇ ಸಾಲಿಗೆ ಸೇರಿದ್ದು. ಟೊಮೆಟೊ ದರ ₹100 ದರ ಏರಿಕೆಯಾಗಿದೆ.

ಇದಕ್ಕೆ ಕಾರಣ ಕಳೆದ ನಾಲ್ಕೈದು ತಿಂಗಳ ಹಿಂದೆ ಮಳೆ ಅಭಾವದಿಂದ ಇಳುವರಿ ಕಡಿಮೆಯಾಗಿದ್ದು, ಬೇಡಿಗೆ ಜಾಸ್ತಿಯಾಗಿದೆ. ಇದರಿಂದ ಇದೀಗ ಟೊಮೆಟೋ ದರದಲ್ಲಿ ದಿಢೀರನೆ ಹೆಚ್ಚಳವಾಗಿದೆ. ಸದ್ಯ ಗ್ರಾಹಕರು ಟೊಮೆಟೊ ಕೊಳ್ಳೋಕು ಹಿಂದೂ ಮುಂದು ನೋಡುವ ಸ್ಥಿತಿ ನಿರ್ಮಾಣ ಆಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಹುಲ್ ಗಾಂಧಿಗೆ 1 ಕೆಜಿ ಜಿಲೇಬಿ ಪಾರ್ಸಲ್ ಮಾಡಿದ ಬಿಜೆಪಿ