Select Your Language

Notifications

webdunia
webdunia
webdunia
webdunia

ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ಮಾಡುತ್ತಿದ್ದ ಸಿ.ಟಿ ರವಿ ಸಿದ್ದರಾಮಯ್ಯ ಎಂಟ್ರಿ

Crime
ವಿಧಾನಸೌಧದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಸಂದರ್ಭ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಗಮಿಸಿದ್ದು, ಕ್ಷಣಕಾಲ ತಬ್ಬಿಬ್ಬಾದ ಘಟನೆ ನಡೆದಿದೆ.
ಸಿದ್ದರಾಮಯ್ಯ ವಿರುದ್ಧ ಅವಾಚ್ಯ ಶಬ್ದ ಬಳಕೆ ಮಾಡಿದ ತಮ್ಮ ಹೇಳಿಕೆಗೆ ಸಮರ್ಥನೆ ನೀಡುತ್ತಿದ್ದ ಸಿ ಟಿ ರವಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ಮಾಡುತ್ತಿದ್ದರು. ಪ್ರಾಸಬದ್ದವಾಗಿ ಸಿ.ಟಿನ ಲೂಟಿ ಅನ್ನುವುದಾದರೆ ಸಿದ್ದುನ ಪೆದ್ದ ಅನ್ನಬಹುದಲ್ಲ. ಸಮಾಜವಾದಿಗಳ ಮಜವಾದಿತನ ನೋಡಿದ್ದೇನೆ. ಸೆಂಟ್ ಹೊಡೆದುಕೊಂಡು ವಾಸನೆ ಮುಚ್ಚಿ ಹಾಕಲು ಸಾಧ್ಯವಿಲ್ಲ ಎಂದು ವಾಗ್ದಾಳಿ ನಡೆಸುತ್ತಿದ್ದರು.
 
ಈ ವೇಳೆ ಸಿದ್ದರಾಮಯ್ಯ ಆಗಮಿಸಿದ್ದು,ತಬ್ಬಿಬ್ಬಾದ ಸಿಟಿ ರವಿ ತಮ್ಮ ಮಾತಿನ ದಾಟಿಯನ್ನು ಬದಲಾಯಿಸಿದರು. ಜೊತೆಗೆ ಸಿದ್ದರಾಮಯ್ಯ ಹೆಸರು ಉಲ್ಲೇಖಿಸದೇ ನಗುಮುಖದಿಂದ ತಡವರಿಸಿಕೊಂಡು ಮಾತು ಮುಂದುವರೆಸಿದರು. ಅತ್ತ ಸಿದ್ದರಾಮಯ್ಯ ಇತ್ತ ಕಡೆ ತಿರುಗದೇ ತಮ್ಮ ಪಾಡಿಗೆ ವಿಧಾನಸೌಧದ ಒಳಗಡೆ ತೆರಳಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಜನರಿಗೆ ಎಲಿಜಬೆತ್ ನಿಂದ ಸಿಕ್ರೇಟ್ ಲೆಟರ್!