Select Your Language

Notifications

webdunia
webdunia
webdunia
webdunia

ದೀಪಾವಳಿ ಬಂತು, ಬೆಂಗಳೂರಿನಲ್ಲಿ ಪಟಾಕಿ ದರ ಎಷ್ಟಿದೆ ಇಲ್ಲಿದೆ ಡೀಟೈಲ್ಸ್

Crackers

Krishnaveni K

ಬೆಂಗಳೂರು , ಸೋಮವಾರ, 28 ಅಕ್ಟೋಬರ್ 2024 (10:47 IST)
Photo Credit: X
ಬೆಂಗಳೂರು: ದೀಪಾವಳಿ ಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಮಾರುಕಟ್ಟೆಯಲ್ಲಿ ಪಟಾಕಿ ಮಾರಾಟ ಭರಾಟೆ ಶುರುವಾಗಿದೆ. ಬೆಂಗಳೂರಿನಲ್ಲಿ ಪಟಾಕಿ ದರ ಡೀಟೈಲ್ಸ್ ಇಲ್ಲಿದೆ ನೋಡಿ.

ದೀಪಾವಳಿ ಹಬ್ಬ ಬಂತೆಂದರೆ ಎಲ್ಲರೂ ಪಟಾಕಿ ಖರೀದಿಗೆ ಮುಗಿಬೀಳುತ್ತಾರೆ. ಆದರೆ ಈ ವರ್ಷ ದೀಪಾವಳಿಗೆ ಪಟಾಕಿಗಳಿಗೂ ರಾಜ್ಯ ಸರ್ಕಾರ ಕೆಲವೊಂದು ನಿರ್ಬಂಧ ಹೇರಿದೆ. ಹಸಿರು ಪಟಾಕಿಗಳನ್ನಷ್ಟೇ ಮಾರಾಟ ಮಾಡಲು ಮತ್ತು ಸಿಡಿಸಲು ಅವಕಾಶ ನೀಡಿದೆ. ಇಲ್ಲದೇ ಹೋದರೆ ಲೈಸೆನ್ಸ್ ರದ್ದು ಮಾಡುವ ಎಚ್ಚರಿಕೆ ನೀಡಿದೆ.

ಕಳೆದ ವರ್ಷವೇ ಪಟಾಕಿ ದರ ಹೆಚ್ಚಾಗಿದೆ ಎಂಬ ಅಪವಾದ ಕೇಳಿಬಂದಿತ್ತು. ಈ ವರ್ಷ ಕಳೆದ ವರ್ಷಕ್ಕಿಂತಲೂ ಕೊಂಚ ದುಬಾರಿಯಾಗಿದೆ. ರಾಜ್ಯ ಸರ್ಕಾರದ ನಿರ್ಬಂಧದ ಹಿನ್ನಲೆಯಲ್ಲಿ ಹಸಿರು ಪಟಾಕಿಗಳಷ್ಟೇ ಮಾರಾಟಕ್ಕೆ ಲಭ್ಯವಿರಲಿದೆ. ದರ ಹೆಚ್ಚಾಗಿದ್ದರೂ ಎಂದಿನಂತೇ ಜನ ಮುಗಿಬಿದ್ದು ಪಟಾಕಿ ಖರೀದಿ ಮಾಡುತ್ತಿರುವುದು ವಿಶೇಷ.

ಸುರ್ ಸರುಬತ್ತಿ 100 ರೂ.ವರೆಗಿದ್ದರೆ,  ನೆಲಚಕ್ರ 350 ರೂ., ಲಕ್ಷ್ಮೀ ಪಟಾಕಿ 15000-2000 ರೂ., ಫ್ಲವರ್ ಪಾಟ್ 660 ರೂ. ವರೆಗೆ ತಲುಪಿದೆ. ಕಳೆದ ವರ್ಷ 60 ರೂ.ಗಳಿದ್ದ ಒಂದು ಪಟಾಕಿಗೆ ಇಂದು 100 ರೂ.ಗೆ ಬಂದು ನಿಂತಿದೆ. ಸರ್ಕಾರದ ಆದೇಶದ ಹಿನ್ನಲೆಯಲ್ಲಿ ಹಸಿರು ಮಾರ್ಕ್ ನೋಡಿಯೇ ಜನ ಪಟಾಕಿ ಖರೀದಿ ಮಾಡುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ದೇವೇಗೌಡರು ಆಂಬ್ಯುಲೆನ್ಸ್ ನಲ್ಲಿ ಬರಲಿ: ನಾಲಿಗೆ ಹರಿಬಿಟ್ಟ ಡಿಕೆ ಸುರೇಶ್ ವಿರುದ್ಧ ಭಾರೀ ಆಕ್ರೋಶ