Publish Date: Tue, 07 Aug 2018 (14:49 IST)
Updated Date: Tue, 07 Aug 2018 (14:52 IST)
ಪೆಟ್ರೋಲ್ ಬಂಕ್‌ವೊಂದರಲ್ಲಿ ಗೋಕಳ್ಳರು ತಡರಾತ್ರಿ ಗೋವುಗಳ ಕಳ್ಳತನಕ್ಕೆ ಅಟ್ಟಹಾಸ ನಡೆಸಿದ್ದಾರೆ. ಅಟ್ಟಹಾಸ ನಡೆಸಿರುವ ಕೃತ್ಯ ಸಿ.ಸಿ. ಟಿವಿಯಲ್ಲಿ ದಾಖಲಾಗಿದ್ದು ಈ ದೃಶ್ಯಾವಳಿಗಳು ವೈರಲ್ ಆಗಿದೆ.
ಕುಂದಾಪುರ-ಸಿದ್ದಾಪುರ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಂತೆ ಇರುವ ಪೆಟ್ರೋಲ್ ಬಂಕ್‌ವೊಂದರಲ್ಲಿ ಗೋಕಳ್ಳರು ತಡರಾತ್ರಿ ನಡೆಸಿದ ಅಟ್ಟಹಾಸ ಸಿ.ಸಿ. ಟಿವಿಯಲ್ಲಿ ದಾಖಲಾಗಿದ್ದು ಈ ದೃಶ್ಯಾವಳಿಗಳು ವೈರಲ್ ಆಗಿದೆ.
ರಾಜ್ಯ ಹೆದ್ದಾರಿಯ ಬಸ್ರೂರು ಮಹಾಲಿಂಗೇಶ್ವರ ಪೆಟ್ರೋಲ್ ಬಂಕ್ ಇದಾಗಿದೆ. ತಡರಾತ್ರಿ 1 ಗಂಟೆ 47 ನಿಮಿಷಕ್ಕೆ ರಾಜ್ಯ ಹೆದ್ದಾರಿಯಲ್ಲಿ ಬಿಳಿ ಬಣ್ಣದ ರಿಟ್ಜ್ ಕಾರೊಂದು ಬಂದು ಬಂಕಿನ ಕೊಂಚ ದೂರದಲ್ಲಿ ನಿಲ್ಲುತ್ತೆ. ಅದರಿಂದ ಒಬ್ಬೊಬ್ಬರಾಗಿ ನಾಲ್ವರು ಮುಸುಕುಧಾರಿಗಳು ಬಂಕಿನೊಳಗೆ ಬಂದು ಅಲ್ಲಿದ್ದ ಬಿಡಾಡಿ ದನಗಳನ್ನು ಹಿಡಿಯಲು ಶತಯತ್ನ ನಡೆಸುತ್ತಾರೆ.
ಕೊನೆಗೂ ಕರುವೊಂದು ಕೈಗೆ ಸಿಗಬೇಕೆನ್ನುವ ಹೊತ್ತಲ್ಲಿ ಯಾವುದೋ ವಾಹನದ ಬರುವಿಕೆಗೆ ಬೆದರಿಯೋ ಅಥವಾ ಬೇರ್ಯಾವುದೋ ಕಾರಣಕ್ಕೆ ನಾಲ್ವರು ದುಷ್ಕರ್ಮಿಗಳು ಅಲ್ಲಿಂದ ಕಾಲ್ಕೀಳುತ್ತಾರೆ. ಇದಷ್ಟು ಕುಕೃತ್ಯಗಳು ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದೆ.