Publish Date: Sat, 31 May 2025 (13:14 IST)
Updated Date: Sat, 31 May 2025 (13:17 IST)
ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಶಾಲೆಗಳಿಗೆ ಆರೋಗ್ಯ ಇಲಾಖೆಯಿಂದ ಮಹತ್ವದ ಸೂಚನೆ ದೊರೆತಿದೆ.
ಕಳೆದ ಎರಡು ವಾರಗಳಿಂದ ರಾಜ್ಯದಲ್ಲಿ ಕೊರೋನಾ ಪ್ರಕರಣಗಳು ಗಣನೀಯವಾಗಿ ಏರಿಕೆಯಾಗುತ್ತಲೇ ಇದೆ. ಈಗಷ್ಟೇ ಎಲ್ಲಾ ಶಾಲೆಗಳೂ ಪುನರಾರಂಭವಾಗಿದ್ದು, ಮಕ್ಕಳಲ್ಲಿ ಕೊರೋನಾ ಹರಡದಂತೆ ಆರೋಗ್ಯ ಇಲಾಖೆ ಕೆಲವು ಸಲಹೆ ಸೂಚನೆಗಳನ್ನು ನೀಡಿದೆ. ವಿಶೇಷವಾಗಿ ಬೆಂಗಳೂರಿನಲ್ಲಿ ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ಕ್ರಮವಾಗಿ ಕೆಲವು ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ.
ಆರೋಗ್ಯ ಇಲಾಖೆ ಗೈಡ್ ಲೈನ್ಸ್
-ಶೀತ, ಜ್ವರ, ಕೆಮ್ಮುವಿನಂತಹ ಆರೋಗ್ಯ ಸಮಸ್ಯೆಯಿದ್ದರೆ ಶಾಲೆಗೆ ಕಳುಹಿಸಬಾರದು.
-ಸದರಿ ಲಕ್ಷಣಗಳು ಸಂಪೂರ್ಣವಾಗಿ ಗುಣಮುಖರಾದ ಬಳಿಕವೇ ಮಕ್ಕಳನ್ನು ಶಾಲೆಗೆ ಕಳುಹಿಸಬೇಕು.
-ಶಾಲೆಗೆ ಬಂದಾಗ ಮಕ್ಕಳಲ್ಲಿ ಜ್ವರ, ಶೀತ, ಕೆಮ್ಮು ಲಕ್ಷಣಗಳು ಕಂಡುಬಂದಲ್ಲಿ ಪೋಷಕರಿಗೆ ಮಾಹಿತಿ ನೀಡಿ ತಕ್ಷಣವೇ ಮನೆಗೆ ಕಳುಹಿಸಬೇಕು.
-ಶಾಲಾ ಸಿಬ್ಬಂದಿಗಳಲ್ಲೂ ಜ್ವರ, ಶೀತ ಲಕ್ಷಣಗಳು ಕಂಡುಬಂದಲ್ಲಿ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಬೇಕು.
-ಶಾಲೆಗಳಲ್ಲಿ ಸ್ಯಾನಿಟೈಸ್ ಮಾಡುವುದು, ಕೈ ತೊಳೆದುಕೊಳ್ಳುವುದು ಇತ್ಯಾದಿ ಸ್ವಚ್ಛತಾ ಕ್ರಮಗಳನ್ನು ಪಾಲಿಸಬೇಕು.
ರಾಜ್ಯದಲ್ಲಿ ಈಗ ಆಕ್ಟಿವ್ ಕೊರೋನಾ ಕೇಸ್ ಗಳು 234 ಇದ್ದು, ಬೆಂಗಳೂರಿನಲ್ಲೇ 150 ಕ್ಕೂ ಅಧಿಕ ಕೇಸ್ ಗಳಿವೆ. ಈ ಕಾರಣಕ್ಕೆ ಶಾಲೆಗಳಿಗೆ ಗೈಡ್ ಲೈನ್ಸ್ ವಿಧಿಸಲಾಗಿದೆ.