Select Your Language

Notifications

webdunia
webdunia
webdunia
webdunia

ಕೋವಿಡ್ ಲಸಿಕೆ : ರಾಜ್ಯದ ಯಾವ ಆಸ್ಪತ್ರೆಯಲ್ಲಿ ಟ್ರಯಲ್ ನಡೆಯುತ್ತೆ ಗೊತ್ತಾ?

ಕೋವಿಡ್ ಲಸಿಕೆ : ರಾಜ್ಯದ ಯಾವ ಆಸ್ಪತ್ರೆಯಲ್ಲಿ  ಟ್ರಯಲ್ ನಡೆಯುತ್ತೆ ಗೊತ್ತಾ?
ಬೆಳಗಾವಿ , ಭಾನುವಾರ, 5 ಜುಲೈ 2020 (19:01 IST)
ಕೋವಿಡ್ -19  ಚಿಕಿತ್ಸೆಗಾಗಿ ಅಭಿವೃದ್ಧಿಪಡಿಸಿರುವ ವ್ಯಾಕ್ಸಿನ್ ಕ್ಯಾಂಡೇಟ್  (ಸಂಭಾವ್ಯ ಲಸಿಕೆ) ಕ್ಲಿನಿಕಲ್ ಟ್ರಯಲ್ ಕರ್ನಾಟಕದಲ್ಲಿಯೂ ನಡೆಯಲಿದೆ.

ರಾಜ್ಯದ ಬೆಳಗಾವಿಯ ಜಿವನ್ ಸಖಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಸೇರಿದಂತೆ ದೇಶದ ಆಯ್ದ 12 ಆಸ್ಪತ್ರೆಗಳಲ್ಲಿ ಈ ಕ್ಲಿನಿಕಲ್ ಟ್ರಯಲ್  ನಡೆಯಲಿದೆ.

ಈ ವ್ಯಾಕ್ಸಿನ್ ಅನ್ನು ಆಗಸ್ಟ 15 ರ ವೇಳೆಗೆ ಸಾರ್ವಜನಿಕ ಬಳಕೆಗೆ ಬಿಡುಗಡೆ ಮಾಡುವ ಗುರಿಹೊಂದಿರುವ ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತು (ಐಸಿಎಂಆರ್), ಕ್ಲಿನಿಕಲ್ ಟ್ರಯಲ್ ನ್ನು ಆದ್ಯತೆಯ ಮೇಲೆ ಕೈಗೊಳ್ಳುವಂತೆ ಈ ಆಸ್ಪತ್ರೆಗಳಿಗೆ ಸೂಚಿಸಿರುವಂತೆ ಬೆಳಗಾವಿಯ ಜೀವನ್ ಸಖಿ ಆಸ್ಪತ್ರೆಗೂ ಸೂಚಿಸಲಾಗಿದೆ.

ಒಟ್ಟು ಎರಡು ಹಂತಗಳಲ್ಲಿ ನಡೆಯುವ ಟ್ರಯಲ್ ಗಾಗಿ ಬೆಳಗಾವಿಯ ಜೀವನ್ ಸಖಿ ಆಸ್ಪತ್ರೆಯು ಮೊದಲ ಹಂತದಲ್ಲಿ ಆಯ್ಕೆ ಆಗಿದ್ದು, ಇದಕ್ಕಾಗಿ ಸ್ವಯಂ ಸೇವಕರ ನೋಂದಣಿ ಕಾರ್ಯ ನಡೆಯುತ್ತಿದೆ ಎಂದು ಆಸ್ಪತ್ರೆಯ ಮೂಲದಿಂದ ತಿಳಿದು ಬಂದಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಪತ್ನಿ ಮೇಲಿನ ಕೋಪಕ್ಕೆ ಹೆತ್ತ ಪುಟ್ಟ ಮಗಳನ್ನೇ ಕೊಂದ ತಂದೆ