ಬೆಂಗಳೂರು: ಐಷಾರಾಮಿ ಜೀವನ ನಡೆಸುವ ದುರಾಸೆಯಿಂದ ಸಿಗ್ನಲ್ ಬ್ಯಾಟರಿ ಕದಿಯುತ್ತಿದ್ದ ದಂಪತಿಯನ್ನು ನಗರ ಪೊಲೀಸರು ಬಂಧಿಸಿದ್ದಾರೆ.
30 ವರ್ಷದ ಸಿಕಂದರ್ ಮತ್ತು ಆತನ ಪತ್ನಿ 29 ವರ್ಷದ ನಜ್ಮಾ ಬಂಧಿತರು. ಇಬ್ಬರೂ ಆರೇಳು ತಿಂಗಳಿಂದ ಈ ಕೃತ್ಯ ಮಾಡುತ್ತಿದ್ದು, ಇವರ ವಿರುದ್ಧ 17 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಲವು ಪ್ರಕರಣ ದಾಖಲಾಗಿದೆ.
ಸಿಕಂದರ್ ಟೀ ಮಾರಾಟ ಮಾಡುತ್ತಿದ್ದ. ಆದರೆ ದುಬಾರಿ ಜೀವನಕ್ಕೆ ಇದು ಸಾಕಾಗುತ್ತಿರಲಿಲ್ಲ. ಈ ಕಾರಣಕ್ಕೆ ಪತ್ನಿಯನ್ನು ಕರೆದುಕೊಂಡು ಬೆಳಗ್ಗಿನ ಜಾವ ನಗರದಲ್ಲಿ ತಿರುಗಾಡಿ ಸಿಗ್ನಲ್ ಬ್ಯಾಟರಿ ಕದಿಯುತ್ತಿದ್ದರು. ಸಿಸಿ ಕ್ಯಾಮರಾದಲ್ಲಿ ಇವರ ಕೃತ್ಯ ಬಯಲಾಗಿತ್ತು. ಅದರಂತೆ ಬಂಧಿಸಲಾಗಿದೆ. ಒಂದು ಬ್ಯಾಟರಿಗೆ ಕನಿಷ್ಠ 1000 ರೂ.ಗಳಷ್ಟು ಬೆಲೆಯಿದೆ. ಬ್ಯಾಟರಿ ಕಿತ್ತರೆ ಸಿಗ್ನಲ್ ಕೆಲಸ ಮಾಡುತ್ತಿರಲಿಲ್ಲ. ಇದರಿಂದ ಸಂಚಾರ ದಟ್ಟಣೆಯಾಗುತ್ತಿತ್ತು.