Select Your Language

Notifications

webdunia
webdunia
webdunia
Tuesday, 8 April 2025
webdunia

ಕೃಷಿ ಇಲಾಖೆಯಲ್ಲಿ ರೈತರಿಗೆ ನೀಡುವ ಕೃಷಿ ಯಂತ್ರೋಪಕರಣಗಳ ಖರೀದಿ ಹಂಚಿಕೆಯಲ್ಲಿ ಭ್ರಷ್ಟಾಚಾರ

Corruption in the distribution
bangalore , ಮಂಗಳವಾರ, 7 ಸೆಪ್ಟಂಬರ್ 2021 (21:21 IST)
ಕೃಷಿ ಇಲಾಖೆಯಲ್ಲಿ ರೈತರಿಗೆ ನೀಡುವ ಕೃಷಿ ಯಂತ್ರೋಪಕರಣಗಳ ಖರೀದಿ ಹಂಚಿಕೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಭ್ರಷ್ಟ ಮುಕ್ತ ಕರ್ನಾಟಕ (ಎಸಿಎಫ್) ಸಂಘಟನೆಯ ರಾಜ್ಯಾಧ್ಯಕ್ಷ ಎನ್.ಕೃಷ್ಣಮೂರ್ತಿ ಅವರು, ಸಚಿವ ಬಿ.ಸಿ. ಪಾಟೀಲ್ ಹಾಗೂ ಹೆಚ್ಚುವರಿ ಕೃಷಿ ನಿರ್ದೇಶಕ ಎಂ.ಎಸ್.ದಿವಾಕರ್ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ಕ್ಕೆ ದೂರು ನೀಡಿದ್ದಾರೆ. 
ಕೃಷಿ ಇಲಾಖೆಯಿಂದ ಸಬ್ಸಿಡಿ ದರದಲ್ಲಿ  ರೈತರಿಗೆ ಸ್ಪ್ರಿಂಕ್ಲರ್, ಡೀಸೆಲ್ ಪಂಪ್‍ಸೆಟ್, ಪವರ್ ಸ್ಪ್ರೇಯರ್, ಬ್ಯಾಟರಿಚಾಲಿತ ಬ್ಯಾಕ್ ಸ್ಪ್ರೇಯರ್ ಸೇರಿದಂತೆ ಇನ್ನಿತರ ಉಪಕರಣಗಳನ್ನು ನೀಡಲಾಗುತ್ತದೆ. ಅರ್ಜಿ ಸಲ್ಲಿಸಿದ ರೈತರಿಗೆ ಸಬ್ಸಿಡಿ ದರದಲ್ಲಿ ಈ ಉಪಕರಣಗಳನ್ನು ನೀಡಲಾಗುತ್ತದೆ. ಆದರೆ, ಇದರ ಖರೀದಿ ಹಾಗೂ ಹಂಚಿಕೆಯಲ್ಲಿ ಭಾರಿ ಮಟ್ಟದ ಭ್ರಷ್ಟಾಚಾರ ನಡೆದಿದೆ. ಯಂತ್ರೋಪಕರಣ ಕಂಪನಿಗಳ ಜತೆ ಶಾಮೀಲಾಗಿ ಸಚಿವರು ತಮ್ಮ ಆಪ್ತ ಅಧಿಕಾರಿ ಹೆಚ್ಚುವರಿ ಕೃಷಿ ನಿರ್ದೇಶಕ ದಿವಾಕರ್ ಮೂಲಕ 210 ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಕಿಕ್‍ಬ್ಯಾಕ್ ಪಡೆದಿz್ದÁರೆ ಎಂದು ದೂರಿನಲ್ಲಿ ಕೃಷ್ಣ ಮೂರ್ತಿ ಆರೋಪಿಸಿದ್ದಾರೆ. 
ಕೃಷಿ ಯಂತ್ರೋಪಕರಣಗಳನ್ನು ದಾಸ್ತಾನು ಪಡೆಯದೆಯೇ ಯಂತ್ರೋಪಕರಣ ಪೂರೈಕೆ ಆಗಿದೆ ಎಂದು ಡಿಸಿ ಬಿಲï ಮಾಡಿ ನೂರಾರು ಕೋಟಿ ಲೂಟಿ ಹೊಡೆದಿದ್ದಾರೆ. ಇಲಾಖೆಯು ಕೃಷಿ ಯಂತ್ರೋಪಕರಣ ಖರೀದಿ ಮಾಡಿರುವ ಹಲವು ಕಂಪನಿಗಳು ಪ್ರಭಾವಿಗಳ ಬೇನಾಮಿ ಕಂಪನಿಗಳು ಎಂಬ ಅನುಮಾನವಿದೆ. ಸಚಿವರ ಸೂಚನೆಯಂತೆಯೇ ನಡೆದಿರುವ ಹಗರಣ ಎಂದು ಇಡೀ ಇಲಾಖೆಯೇ ಮಾತನಾಡುತ್ತಿದೆ. ಟೆಂಡರ್‍ನಲ್ಲಿ ಭಾಗವಹಿಸುವ ಸಂಸ್ಥೆಗಳ ಜತೆ ಒಳ ಒಪ್ಪಂದ ಮಾಡಿಕೊಂಡು ತಮಗೆ ಬೇಕಾದ ಕಂಪನಿಗಳಿಗೆ ಟೆಂಡರ್ ಕೊಡುತ್ತಾರೆ. ಕೃಷಿ ಸಾಮಗ್ರಿಗಳ ವಿತರಣೆಯಲ್ಲಿ ಯಾವುದೇ ಕಂಪನಿಗಳು ರೈತರಿಗೆ ಶೇ.50 ರಷ್ಟು ಸಾಮಗ್ರಿಗಳನ್ನು ಪೂರೈಕೆ ಮಾಡಿಯೇ ಇಲ್ಲ. ಇದರದ್ದೇ ಬೇನಾಮಿ ಕಂಪನಿಗಳಾದ ಕಾರಣ ಇದರ ಬಗ್ಗೆ ಯಾರೂ ಚಕಾರ ಎತ್ತುವುದಿಲ್ಲ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಕೃಷ್ಣಮೂರ್ತಿ ಆಗ್ರಹಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಷ್ಟ್ರೀಯ ಶಿಕ್ಷಣ ನೀತಿ ಕೇವಲ ವಿದ್ಯಾರ್ಥಿಗಳ ಪರ: ಸಚಿವ ಡಾ.ಸಿ.ಎನ್ ಅಶ್ವತ್ಥನಾರಾಯಣ