Select Your Language

Notifications

webdunia
webdunia
webdunia
webdunia

13 ನೇ ತಾರೀಖು ರೈತರಿಂದ ವಿಧಾನ ಸೌಧ ಮುತ್ತಿಗೆ

13 ನೇ ತಾರೀಖು ರೈತರಿಂದ ವಿಧಾನ ಸೌಧ ಮುತ್ತಿಗೆ
bangalore , ಸೋಮವಾರ, 6 ಸೆಪ್ಟಂಬರ್ 2021 (20:53 IST)
ಬೆಂಗಳೂರು:-ಕೃಷಿ ಮಾರುಕಟ್ಟೆ ಗೆ ಸಂಬಂಧಿಸಿದಂತೆ ಕಾನೂನುಗಳನ್ನ ಸುಗ್ರೀವಾಜ್ಞೆಯ ಮೂಲಕ ಸರ್ಕಾರ ಜಾರಿಗೆ ತಂದಿದೆ. ಇದು ಅತ್ಯಂತ ಖಂಡನೀಯ. ಈ ಹಿಂದೆ ರೈತರ ಮೇಲೆ ಲಾಠಿ ಪ್ರಹಾರ ಮಾಡಿದ್ರು,ಹಿಂಸೆ ಮಾಡಿದ್ರು. ಈ ಎಲ್ಲಾ ಹಿಂಸೆ ಸಹಿಸಿಕೊಂಡು ಇಂದಿಗೆ 9 ತಿಂಗಳಾಯ್ತು.ಈಗ ಎಪಿಎಂಸಿ ಸುಮಾರು 80 ಭಾಗ ಕ್ಲೋಸ್ ಆಗಿದೆ.ರೆವಿನ್ಯೂ ಕಟ್ ಆಗಿದೆ. ಮಾರುಕಟ್ಟೆ ಕೇವಲ ನೆಪಮಾತ್ರಕ್ಕೆ ಮಾತ್ರ ಉಳಿದಿದೆ.  ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಗೆ ಪತ್ರ ಬರೆದಿದೇವೆ. ಹೀಗಾಗಿ ಮುಖ್ಯಮಂತ್ರಿಗಳು , ಸರ್ಕಾರ ಮುಂಚಿತವಾಗಿ ತಮ್ಮ ನಿರ್ಧಾರ ಪ್ರಕಟಿಸಬೇಕು.ಇದೇ ತಿಂಗಳ 13 ರ ಸೋಮವಾರ ಬೆಳ್ಳಿಗೆ 10 ಗಂಟೆಗೆ ಕ್ರಾಂತಿವೀರ ಸಂಗೋಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಪ್ರತಿಭಟನಾ ಮೆರವಣಿಗೆ ನಡೆಸುತ್ತೇವೆ .ತದನಂತರ ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ. ಅಷ್ಟೇ ಅಲ್ಲದೆ ಇದೇ ತಿಂಗಳು 27 ರಂದು ಭಾರತ್ ಬಂದ್ ಕೂಡ ಮಾಡುವುದಾಗಿ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ

Share this Story:

Follow Webdunia kannada

ಮುಂದಿನ ಸುದ್ದಿ

ಚಾಕೋಲೇಟ್, ಗುಲಾಬಿ ಹೂ ನೀಡಿ ವಿದ್ಯಾರ್ಥಿಗಳನ್ನು ಸ್ವಾಗತಿಸಿದ ಸಕಾಲ ಸಚಿವ ಬಿ.ಸಿ ನಾಗೇಶ್