Publish Date: Sat, 23 Feb 2019 (14:49 IST)
Updated Date: Sat, 23 Feb 2019 (14:50 IST)
ಮೈತ್ರಿ ಸರಕಾರದಲ್ಲಿ ಸಚಿವ ಸಂಪುಟದ ಬಳಿಕ ನೆನೆಗುದಿಗೆ ಬಿದ್ದಿದ್ದ ನಿಗಮ ಮಂಡಳಿಗಳಿಗೆ ಈಗ ನೇಮಕ ಮಾಡಲಾಗಿದೆ. ಜೆಡಿಎಸ್ ತನ್ನ ಪಟ್ಟಿಯನ್ನು ಇಂದು ರಿಲೀಸ್ ಮಾಡಲಿದೆ.
ಕೊನೆಗೂ ಜೆಡಿಎಸ್ ನಿಗಮ ಮಂಡಳಿ ಪಟ್ಟಿ ಅಂತಿಮಗೊಂಡಿದೆ. ಮಾಜಿ ಶಾಸಕ ಕೋನರೆಡ್ಡಿಗೆ ಸಿಎಂ ರಾಜಕೀಯ ಕಾರ್ಯದರ್ಶಿ ಸ್ಥಾನ ನೀಡಲಾಗಿದೆ. ಇನ್ನು ನಿಸರ್ಗ ನಾರಾಯಣಸ್ವಾಮಿ ಹಾಗೂ ಡಾ.ಶ್ರೀನಿವಾಸ ಮೂರ್ತಿಗೆ ಸಂಸದೀಯ ಕಾರ್ಯದರ್ಶಿ ಹುದ್ದೆ ಹಾಗೂ ಶಾಸಕ ಕೆ.ಅನ್ನದಾನಿ ಸೇರಿದಂತೆ 10 ಶಾಸಕರಿಗೆ ನಿಗಮ ಮಂಡಳಿಯಲ್ಲಿ ಸ್ಥಾನ ಕಲ್ಪಿಸಲಾಗಿದೆ.
ಲೋಕಸಭೆ ಚುನಾವಣೆ ಹಿನ್ನೆಲೆ ಪಟ್ಟಿ ಸಿದ್ಧಗೊಳಿಸಿದ್ದಾರೆ ದೇವೇಗೌಡರು. ನಿಗಮ ಮಂಡಳಿತ ಪಟ್ಟಿಗೆ ಸಚಿವ ರೇವಣ್ಣ ಪೂಜೆ ಸಲ್ಲಿಸಲಿದ್ದು, ಇಂದು ಪಟ್ಟಿ ಬಿಡುಗಡೆಯಾಗುವ ಸಾಧ್ಯತೆಯಿದೆ.