Select Your Language

Notifications

webdunia
webdunia
webdunia
webdunia

ಬೆಚ್ಚಿಬಿದ್ದ ಕರ್ನಾಟಕ- 100 ಜನರಲ್ಲಿ ಕೊರೊನಾ ಶಂಕೆ : ಸಿಎಂ ಸ್ಪಷ್ಟನೆ

ಬೆಚ್ಚಿಬಿದ್ದ ಕರ್ನಾಟಕ- 100 ಜನರಲ್ಲಿ ಕೊರೊನಾ ಶಂಕೆ : ಸಿಎಂ ಸ್ಪಷ್ಟನೆ
ಬೆಳಗಾವಿ , ಭಾನುವಾರ, 15 ಮಾರ್ಚ್ 2020 (12:42 IST)
ರಾಜ್ಯದಲ್ಲಿ 100 ಜನ ಕೊರೊನಾ ಶಂಕಿತರಿದ್ದು, ಅವರ ಮೇಲೆ ನಿಗಾ ಇರಿಸಲಾಗಿದೆ. ಹೀಗಂತ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.

 ಸರಕಾರದಿಂದ ಕೊರೊನಾ ವೈರಸ್ ಎದುರಿಸಲು ಸನ್ನದ್ಧವಾಗಿದ್ದು, ಜನರು ಆತಂಕ ಪಡುವ ಅಗತ್ಯ ಇಲ್ಲ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಕೊರೊನಾ ತಡೆಗೆ ಆರೋಗ್ಯ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ. ರಾಜ್ಯದಲ್ಲಿ 6 ಜನರಲ್ಲಿ ಕೊರೊನಾ ವೈರಸ್ ಪತ್ತೆಯಾಗಿದೆ.

100 ಜನರ ಮೇಲೆ ಶಂಕೆ ವ್ಯಕ್ತವಾಗಿದ್ದು, ಅವರ ಮೇಲೆ ಆರೋಗ್ಯ ಇಲಾಖೆ ನಿಗಾ‌ ವಹಿಸಿದೆ. ರಾಜ್ಯದ ಜನತೆ ಆತಂಕ ಪಡುವ ಅಗತ್ಯವಿಲ್ಲ. ಸರಕಾರ ಕೊರೊನಾ ತಡೆಯುವಲ್ಲಿ ಎಲ್ಲ ರೀತಿಯ ಕ್ರಮ ತೆಗೆದುಕೊಳ್ಳಲಾಗಿದೆ ಎಂದರು.



Share this Story:

Follow Webdunia kannada

ಮುಂದಿನ ಸುದ್ದಿ

ರಸ್ತೆ ಕಾಮಗಾರಿ ವಿಚಾರದಲ್ಲಿ ತಾರತಮ್ಯ; ಜಿಟಿಡಿಗೆ ಶಿವಮೂರ್ತಿ ಬೆಂಬಲಿಗರಿಂದ ಘೇರಾವ್