ರಾಜ್ಯದ ಮತ್ತೊಬ್ಬ ಸಚಿವರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.
ರೋಗದ ಲಕ್ಷಣಗಳು ಇಲ್ಲದಿದ್ದರೂ ಖುದ್ದಾಗಿ ಹೋಗಿ ಸಚಿವ ಆನಂದ್ ಸಿಂಗ್ ಕೋವಿಡ್ -19 ಪರೀಕ್ಷೆ ಮಾಡಿಸಿಕೊಂಡಿದ್ದರು.
ಅವರಿಗೆ ಕೊರೊನಾ ವೈರಸ್ ತಗುಲಿರೋದು ವರದಿಯಲ್ಲಿ ಪಕ್ಕಾ ಆಗಿದೆ.
ತಮ್ಮ ನಿವಾಸದಲ್ಲಿಯೇ ಸಚಿವ ಆನಂದ ಸಿಂಗ್ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಆನಂದ ಸಿಂಗ್ ಅವರು ಕಾರಿನ ಚಾಲಕನಿಗೂ ಕೊರೊನಾ ಪಾಸಿಟಿವ್ ವರದಿ ಬಂದಿದೆ.