Publish Date: Sun, 26 Jul 2020 (09:11 IST)
Updated Date: Sun, 26 Jul 2020 (09:20 IST)
ನವದೆಹಲಿ: ಪಾಕಿಸ್ತಾನದ ವಿರುದ್ಧ ಹೋರಾಡಿ ನಮ್ಮ ಹೆಮ್ಮೆಯ ಭಾರತೀಯ ಸೈನಿಕರು ವಿಜಯದ ಸಂಕೇತವಾಗಿ ಭಾರತದ ತ್ರಿವರ್ಣ ಧ‍್ವಜ ಹಾರಿಸಿ ಇಂದಿಗೆ 21 ವರ್ಷ.
ಕಾರ್ಗಿಲ್ ವಿಜಯ್ ದಿವಸ್ ನ್ನು ಇಂದು ದೇಶದಾದ್ಯಂತ ಹೆಮ್ಮೆಯಿಂದ ಆಚರಿಸಲಾಗುತ್ತಿದೆ. ಟೈಗರ್ ಹಿಲ್ ಎಂಬ ಪ್ರಮುಖ ಪ್ರದೇಶವನ್ನು ಭಾರತೀಯ ಯೋಧರು ಕೈ ವಶ ಮಾಡಿಕೊಂಡ ಬಳಿಕ ಪಾಕ್ ಅಂದು ತನ್ನ ಸೋಲೊಪ್ಪಿಕೊಂಡಿತ್ತು. ಇಂದು ಪ್ರಧಾನಿ ಮೋದಿ ಮನ್ ಕೀ ಬಾತ್ ಕಾರ್ಯಕ್ರಮವಿದ್ದು, ಈ ವೇಳೆ ಕಾರ್ಗಿಲ್ ಹೀರೋಗಳಿಗೆ ನುಡಿನಮನ ಸಲ್ಲಿಸುವ ನಿರೀಕ್ಷೆಯಿದೆ.