Publish Date: Mon, 05 Apr 2021 (12:15 IST)
Updated Date: Mon, 05 Apr 2021 (12:17 IST)
ಬೆಂಗಳೂರು : ಸಿಡಿ ಕೇಸ್ ನಲ್ಲಿ ಒದ್ದಾಡುತ್ತಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಕೊರೊನಾ ಸೋಂಕು ತಗುಲಿರುವುದಾಗಿ ತಿಳಿದುಬಂದಿದೆ.
ಈ ಬಗ್ಗೆ ಮಾಹಿತಿ ನೀಡಿದ ಸಚಿವ ಭೈರತಿ ಬಸವರಾಜ್ ಅವರು, ರಮೇಶ್ ಜಾರಕಿಹೊಳಿಗೆ ಕೊರೊನಾ ಸೋಂಕು ತಗುಲಿದೆ. ಜಾರಕಿಹೊಳಿ ಬೆಂಗಳೂರಿನಲ್ಲಿಯೇ ಇದ್ದಾರೆ. ನಿನ್ನೆ ರಮೇಶ್ ಜತೆ ಫೋನ್ ನಲ್ಲಿ ಮಾತಾಡಿದ್ದೆ. ಜಾರಕಿಹೊಳಿ ಕೊರೊನಾ ಬಂದಿದೆ ಎಂದಿದ್ದಾರೆ. ಚೇತರಿಕೆ ಬಳಿಕ ಪ್ರಚಾರಕ್ಕೆ ರಮೇಶ್ ಬರ್ತಾರೆ ಎಂದು ಅವರು ತಿಳಿಸಿದ್ದಾರೆ.
ಏಪ್ರಿಲ್ 1ರಂದು ರಮೇಶ್ ಜಾರಕಿಹೊಳಿ ಗೋಕಾಕ್ ಆಸ್ಪತ್ರೆಗೆ ಬಂದು ಕೊರೊನಾ ಟೆಸ್ಟ್ ಮಾಡಿಸಿದ್ದಾರೆ. ಆ ವರದಿಯಲ್ಲಿ ಇದೀಗ ಅವರಿಗೆ ಪಾಸಿಟಿವ್ ಬಂದಿದೆ. ಹೀಗಾಗಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.