Publish Date: Wed, 08 Jul 2020 (20:20 IST)
Updated Date: Wed, 08 Jul 2020 (20:23 IST)
ಶಾಸಕ ಹಾಗೂ ಅವರ ಧರ್ಮಪತ್ನಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದೆ.
ಹೊಸಕೋಟೆ ಮತಕ್ಷೇತ್ರದ ಶಾಸಕ ಶರತ್ ಬಚ್ಚೇಗೌಡ ಹಾಗೂ ಧರ್ಮಪತ್ನಿ ಕೊರೊನಾ ಪಾಸಿಟಿವ್ ಕಂಡು ಬಂದಿದೆ.
ಶಾಸಕರೇ ಖುದ್ದು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಷಯ ಪ್ರಕಟ ಮಾಡಿದ್ದಾರೆ.
ಯಾರು ಯಾರು ತಮ್ಮ ಸಂಪರ್ಕಕ್ಕೆ ಬಂದಿದ್ದಾರೋ, ಯಾರಲ್ಲಿ ಕೋವಿಡ್ -19 ಲಕ್ಷಣಗಳು ಕಂಡು ಬಂದಿವೆಯೋ ಅವರೆಲ್ಲಾ ತಕ್ಷಣ ಕೊರೊನಾ ಟೆಸ್ಟ್ ಮಾಡಿಸಿಕೊಳ್ಳಬೇಕೆಂದು ಶಾಸಕರು ಕೋರಿದ್ದಾರೆ.