Select Your Language

Notifications

webdunia
webdunia
webdunia
webdunia

ಕೊರೊನಾ ಎಫೆಕ್ಟ್ : ಬೆಂಗಳೂರಿಗೆ ಬಂದರೆ ಹುಷಾರ್

ಕೊರೊನಾ ಎಫೆಕ್ಟ್ : ಬೆಂಗಳೂರಿಗೆ ಬಂದರೆ ಹುಷಾರ್
ಬೆಂಗಳೂರು , ಮಂಗಳವಾರ, 24 ಮಾರ್ಚ್ 2020 (17:13 IST)
ಕೊರೊನಾ ವೈರಸ್ ಹರಡುರಿಕೆ ತಡೆಗಟ್ಟುವ ನಿಟ್ಟಿನಲ್ಲಿ ರಾಜಧಾನಿ ಬೆಂಗಳೂರಿಗೆ ವಾಹನಗಳ ಸಂಚಾರ ನಿಷೇಧಿಸಲಾಗಿದೆ.

ಬೆಂಗಳೂರಿನ ಮುಖ್ಯದ್ವಾರವಾದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಗಡಿ ನೆಲಮಂಗಲ ತಾಲೂಕಿನ ಹಳೇ ನಿಜಗಲ್ಲು ಬಳಿ ಸ್ಥಾಪಿಸಲಾಗಿರುವ ಚೆಕ್ ಪೋಸ್ಟ್ ನಲ್ಲಿ ಬೇರೆ ಜಿಲ್ಲೆಗಳಿಂದ ಬರುವ ವಾಹನಗಳನ್ನು ನಿಷೇಧಿಸಿ ವಾಹನಗಳನ್ನು ವಾಪಸ್ಸು ಕಳುಹಿಸಲಾಗುತ್ತಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಲಾಕ್ ಡೌನ್ ಇರುವ ಕಾರಣ ನೆಲಮಂಗಲ ಉಪ ವಿಭಾಗ ಪೋಲೀಸರಿಂದ ಜಿಲ್ಲೆಯ ನೆಲಮಂಗಲ ಗಡಿಯಲ್ಲಿ ವಾಹನಗಳನ್ನು ನಿಷೇಧಿಸಿ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಅವಶ್ಯಕತೆ, ತುರ್ತು ಇರುವವರಿಗೆ ಹಾಗೂ ಅಂಬ್ಯುಲೆನ್ಸ್ ಗಳಿಗೆ ಮಾತ್ರ ಬೆಂಗಳೂರಿಗೆ ಪ್ರವೇಶ ಕಲ್ಪಿಸಲಾಗುತ್ತಿದೆ.

ಇದೇ ಚೆಕ್ ಪೋಸ್ಟ್ ನಲ್ಲಿ ನರ್ಸಗಳು, ಆಶಾ ಕಾರ್ಯಕರ್ತೆಯರು ಪ್ರಯಾಣಿಕರ ಆರೋಗ್ಯ ತಪಾಸಣೆ(ಥರ್ಮಲ್ ಸ್ಕ್ರೀನಿಂಗ್) ಮಾಡುತ್ತಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಯುಗಾದಿ ಆಚರಣೆಗೆ ಈ ಜಿಲ್ಲೆಗೆ ಬರಲೇಬೇಡಿ ಎಂದ ಜಿಲ್ಲಾಧಿಕಾರಿ