Select Your Language

Notifications

webdunia
webdunia
webdunia
webdunia

ಕಾಲಿನಲ್ಲಾದ ಗಾಯದಿಂದ ರಕ್ತದ ಬದಲು ಬಂದ ತಾಮ್ರದ ಮೊಳೆಗಳೆಷ್ಟು ಗೊತ್ತಾ…?

ಕಾಲಿನಲ್ಲಾದ ಗಾಯದಿಂದ ರಕ್ತದ ಬದಲು ಬಂದ ತಾಮ್ರದ ಮೊಳೆಗಳೆಷ್ಟು ಗೊತ್ತಾ…?
ಚಾಮರಾಜನಗರ , ಬುಧವಾರ, 17 ಜನವರಿ 2018 (11:33 IST)
ಚಾಮರಾಜನಗರ : ಪ್ರತಿಯೊಬ್ಬ ಮನುಷ್ಯನ ದೇಹದ ಯಾವುದೇ ಭಾಗದಲ್ಲಿ ಗಾಯವಾದರೂ ಬರುವುದು ರಕ್ತ ಎಂಬ ವಿಷಯ ಎಲ್ಲರಿಗೂ ತಿಳಿದೇ ಇದೆ. ಆದರೆ ಗುಂಡ್ಲುಪೇಟೆ ತಾಲೂಕಿನ ದೊಡ್ಡತಪ್ಪೂರು ಗ್ರಾಮದಲ್ಲಿ ವ್ಯಕ್ತಿಯೊಬ್ಬರ ಕಾಲಿನಲ್ಲಿ ಗಾಯವಾಗಿ ರಕ್ತದ ಬದಲು ತಾಮ್ರದ ಮೊಳೆಗಳು ಹೊರಬರುತ್ತಿರುವಂತಹ ಆಶ್ಚರ್ಯಕರ ಘಟನೆ ನಡೆದಿದೆ.

 
ಈ ಆಶ್ಚರ್ಯಕರ ಘಟನೆ ಕಂಡುಬಂದಿದ್ದು ಮಾದಪ್ಪ ಎಂಬುವವರ ಕಾಲಿನಲ್ಲಿ. ಅವರು ಕಳೆದ ಹುಣ್ಣಿಮೆಯ ದಿನ  ಜಮೀನಿನಿಂದ ಮನೆಗೆ ಬರುವಾಗ ಮಾಟ ಮಾಡಿದ ಜಾಗದಲ್ಲಿ ಕಾಲಿಟ್ಟಿದ್ದರು. ಅವರಿಗೆ ಮಾಟಮಂತ್ರದ ಬಗ್ಗೆ ನಂಬಿಕೆ ಇರದ ಕಾರಣ ಅದರ ಬಗ್ಗೆ ಜಾಸ್ತಿ ತಲೆಕೆಡಿಸಿಕೊಂಡಿರಲಿಲ್ಲ. ಆದರೆ ಮರುದಿನ ಅವರ ಕಾಲಲ್ಲಿ ಗುಳ್ಳೆಯೊಂದು ಕಂಡುಬಂದಿದ್ದು, ವೈದರ ಬಳಿ ಹೋದಾಗ ಅದನ್ನು ಒಡೆದು ಔಷಧಿ ಹಚ್ಚಿದರು. ಆದರೂ ಗಾಯ ಗುಣವಾಗದೇ ಇದ್ದಾಗ ಹೆದರಿದ ಅವರ ಪತ್ನಿ ಅದೇ ತಾಲೂಕಿನ ತವರೆಕಟ್ಟೆಯಲ್ಲಿರುವ ಮಹದೇಶ್ವರ ಸನ್ನಿಧಿಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಅರ್ಚಕರು ಆ ಗಾಯದ ಮೇಲೆ ನಿಂಬೆರಸ ಹಾಕಿ ಕಾಲಿನಿಂದ 30 ರಿಂದ 40 ತಾಮ್ರದ ಮೊಳೆಗಳನ್ನು ಹೊರಗೆ ತೆಗೆಯುವುದನ್ನು ಕಂಡು ಎಲ್ಲರೂ ಆಶ್ಚರ್ಯಗೊಂಡರು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕೇಂದ್ರ ಸರ್ಕಾರ ಹಜ್ ಸಬ್ಸಿಡಿ ರದ್ದು ನಿರ್ಧಾರ ಸ್ವಾಗತಾರ್ಹ- ಯು.ಟಿ.ಖಾದರ್