ಬೆಂಗಳೂರು: ರಾಜ್ಯದಲ್ಲಿ ಮುಂಬರುವ ತಾಲೂಕು ಹಾಗೂ ಜಿಲ್ಲಾ ಪಂಚಾಯತಿ ಚುನಾವಣೆಗೆ ರಾಜ್ಯ ಚುನಾವಣಾ ಆಯೋಗ ಮೀಸಲಾತಿ ಪ್ರಕಟಿಸಿರುವುದು ಶಾಸಕರು ಅಸಮಾಧಾನಕ್ಕೆೆ ಕಾರಣವಾಗಿದೆ. ಈ ಕುರಿತು ಶಾಸಕರು ಸಿಎಂ ಎದುರು ತಮ್ಮ ಅಸಮಾಧಾನ ಹೊರ ಹೊರ ಹಾಕಿದ್ದಾಾರೆ.
ರಾಜ್ಯ ಚುನಾವಣಾ ಆಯೋಗ ಅವೈಜ್ಞಾನಿಕವಾಗಿ ಮೀಸಲಾತಿ ಪ್ರಕಟಿಸಿದೆ ಎಂದು ಅನೇಕ ಶಾಸಕರು ಅಸಮಾಧಾನ ಹೊರ ಹಾಕಿದ್ದಾರೆ. ಅಲ್ಲದೇ ಈ ಕುರಿತು ಕೋರ್ಟ್ ನಲ್ಲಿ ಪ್ರಶ್ನಿಿಸುವ ಬಗ್ಗೆೆ ಚಿಂತನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತು ಮುಖ್ಯಮಂತ್ರಿಿ ಬಿ.ಎಸ್.ಯಡಿಯೂರಪ್ಪ ಅವರು, ಗೃಹ ಮತ್ತು ಕಾನೂನು ಸಚಿವ ಬಸವರಾಜ್ ಬೊಮ್ಮಾಾಯಿ ಅವರೊಂದಿಗೆ ಚರ್ಚೆ ನಡೆಸಿದ್ದಾಾರೆ ಎಂದು ತಿಳಿದು ಬಂದಿದೆ.
ಕೊರೊನಾ ಎರಡನೇ ಅಲೆಯ ಹಿನ್ನೆೆಲೆಯಲ್ಲ ರಾಜ್ಯ ಚುನಾವಣಾ ಆಯೋಗ ತಾಲೂಕು ಹಾಗೂ ಜಿಲ್ಲಾ ಪಂಚಾಯತಿಗಳ ಚುನಾವಣೆಯನ್ನು ಆರು ತಿಂಗಳು ಮುಂದೂಡಿದ್ದು, ಡಿಸೆಂರ್ಬ ನಲ್ಲಿ ಚುನಾವಣೆ ನಡೆಸಲು ತೀರ್ಮಾನಿಸಿದೆ.
ಅದರ ಹಿನ್ನೆೆಲೆಯಲ್ಲಿ ಈಗಾಗಲೇ ಕ್ಷೇತ್ರ ಮರು ವಿಂಗಡನೆ ಮಾಡಿ, ಗುರುವಾರ ಚುನಾವಣಾ ಆಯೋಗ ಮೀಸಲಾತಿ ಪ್ರಕಟಿಸಿದ್ದು ಆಯೋಗ ಪ್ರಕಟಿಸಿರುವ ಮೀಸಲಾತಿ ಅವೈಜ್ಞಾನಿಕವಾಗಿದೆ ಎಂದು ಬಿಜೆಪಿಯ ಶಾಸಕರು ಮುಖ್ಯಮಂತ್ರಿಿ ಯಡಿಯೂರಪ್ಪ ಅವರ ಬಳಿ ಅಸಮಾಧಾನ ಹೊರಹಾಕಿದ್ದಾರೆ ಎಂದು ತಿಳಿದು ಬಂದಿದೆ.
ಕೆಲವು ಕ್ಷೇತ್ರಗಳಲ್ಲಿ ಮೀಸಲಾತಿ ಇಲ್ಲದ ಸಮುದಾಯಕ್ಕೆೆ ಮೀಸಲು ನೀಡಲಾಗಿದೆ. ಒಂದೊಂದು ತಾಲೂಕುಗಳಲ್ಲಿ ಮಹಿಳಾ ಪ್ರಮಾಣ ಹೆಚ್ಚಿಿಗೆ ನೀಡಲಾಗಿದೆ ಎಂದು ಶಾಸಕರು ಬೇಸರ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಆಯೋಗ ಮೀಸಲಾತಿ ಪ್ರಕಟಿಸುವ ಮೊದಲು ಸರ್ಕಾರದ ಅಭಿಪ್ರಾಾಯ ಪಡೆಯಬೇಕಿತ್ತು. ಸರ್ಕಾರ ಶಾಸಕರ ಅಭಿಪ್ರಾಾಯ ಪಡೆಯಬೇಕಿತ್ತು ಎಂಬ ವಾದವನ್ನು ಶಾಸಕರು ಸಚಿವರು ಹಾಗೂ ಸಿಎಂ ಎದುರು ಮುಂದಿಟ್ಟಿಿದ್ದಾರೆ ಎಂದು ತಿಳಿದು ಬಂದಿದೆ.
ಅಲ್ಲದೇ ಆಯೋಗ ಅವೈಜ್ಞಾನಿಕವಾಗಿ ಮೀಸಲಾತಿ ಪ್ರಕಟಿಸಿದೆ ಎಂದು ಆರೋಪಿಸಿ ಕೋರ್ಟ್ ಮೆಟ್ಟಿಿಲೇರುವ ಬಗ್ಗೆೆ ಶಾಸಕರು ಚಿಂತನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಆದರೆ,ಚುನಾವಣಾ ಆಯೋಗ ಸ್ವಾಾಯತ್ತ ಸಂಸ್ಥೆೆಯಾಗಿದ್ದು, ಕಳೆದ ನಾಲ್ಕು ಚುನಾವಣೆಗಳಲ್ಲಿ ಯಾವ ಕ್ಷೇತ್ರದಲ್ಲಿ ಯಾವ ಪ್ರವರ್ಗಕ್ಕೆೆ ಮೀಸಲಾತಿ ನೀಡಲಾಗಿತ್ತು ಎನ್ನುವುದನ್ನು ಪರಿಗಣಿಸಿ ಆಯೋಗ ಹೊಸ ಮೀಸಲಾತಿ ಸಿದ್ಧಪಡಿಸುತ್ತದೆ ಎಂದು ತಿಳಿದು ಬಂದಿದೆ.
ಹೀಗಾಗಿ ಆಯೋಗ ಕಾನೂನು ಪ್ರಕಾರವೇ ಮೀಸಲಾತಿ ಪ್ರಕಟಿಸಿದೆ. ಆದರೆ, ಶಾಸಕರ ಅನುಕೂಲಕ್ಕೆೆ ತಕ್ಕಂತೆ ಮೀಸಲಾತಿ ಪಟ್ಟಿಿ ಸಿದ್ದಪಡಿಸಲಾಗುವುದಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.