Select Your Language

Notifications

webdunia
webdunia
webdunia
webdunia

ರಾಜ್ಯದಲ್ಲಿ 6 ಹೊಸ ನಗರಗಳ ನಿರ್ಮಾಣ ಸಿಎಂ ಬೊಮ್ಮಾಯಿ

Construction of 6 new cities in the state by CM Bommai
bangalore , ಬುಧವಾರ, 16 ನವೆಂಬರ್ 2022 (19:34 IST)
ಉದ್ಯಮಿಗಳು ಆವಿಷ್ಕಾರ ಮಾಡುವುದರ  ಜೊತೆಗೆ ಅಭಿವೃದ್ದಿಗೆ ಪೂರಕ ಕೆಲಸ ಮಾಡಿ ಸರ್ಕಾರಕ್ಕೂ ಅದಾಯ ತರುವ ಕೆಲಸ ಮಾಡಬೇಕು ಎಂದು ಸಿಎಂ ಬೊಮ್ಮಾಯಿ ಕರೆ ನೀಡಿದ್ದಾರೆ. ರಾಜ್ಯದಲ್ಲಿ ಹೊಸದಾಗಿ 6 ನಗರಗಳನ್ನು ಹೈಟೆಕ್ ಸಿಟಿಗಳಾಗಿ ನಿರ್ಮಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದರು.ನಗರದ ಅರಮನೆ ಮೈದಾನದಲ್ಲಿ ನಡೆಯುತ್ತಿರುವ, ರಜತ ಸಂಭ್ರಮದಲ್ಲಿರುವ ಏಷ್ಯಾದ ಅತೀ ದೊಡ್ಡ 'ಬೆಂಗಳೂರು ಟೆಕ್ ಶೃಂಗಸಭೆ'ಯಲ್ಲಿ ಮಾತನಾಡಿದ ಸಿಎಂ, ಆರು ನಗರಗಳ ನಿರ್ಮಾಣಕ್ಕೆ ಸಂಕಲ್ಪ ತೊಟ್ಟಿದ್ದೇವೆ.ಶೀಘ್ರ ಘೋಷಣೆ ಮಾಡುತ್ತೇವೆ ಎಂದರು.ಬೆಂಗಳೂರು ಐಟಿ-ಬಿಟಿ ಸಿಟಿಯಾಗಿದ್ದು, ಇಡೀ ಜಗತ್ತಿನ ಗಮನ ಸೆಳೆದಿದೆ. ರಾಜ್ಯದಲ್ಲಿ ಇನ್ನೂ 6 ಹೊಸ ನಗರಗಳನ್ನ ಕಟ್ಟುತ್ತಿದ್ದೇವೆ. ಹೈಟೆಕ್ ಸಿಟಿಗಳಾಗಿ ಮಂಗಳೂರು, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಮೈಸೂರು, ಬೆಂಗಳೂರು ಸಮೀಪದ ದೇವನಹಳ್ಳಿ ಬಳಿ ಟೆಕ್ ಸಿಟಿ ನಿರ್ಮಿಸಲು ಯೋಜನೆ ರೂಪಿಸಿದ್ದೇವೆ. ಮುಂದಿನ 6 ತಿಂಗಳಲ್ಲಿ ದೇವನಹಳ್ಳಿ ಏರ್ಪೋರ್ಟ್ ಬಳಿ ಸ್ಟಾರ್ಟ್ ಅಪ್ ಪಾರ್ಕ್ ಪ್ರಾರಂಭಿಸಲಿದ್ದೇವೆ ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ನೇಪಾಳಿ ಕೆಲಸದವರಿದ್ರೆ ಇಂದೇ ಖಾಲಿ ಮಾಡ್ಸಿ, ಇಲ್ಲ ನಿಮ್ಮ ಮನೆ ಖಾಲಿ ಮಾಡ್ತಾರೆ..!