Select Your Language

Notifications

webdunia
webdunia
webdunia
webdunia

ಸರ್ಕಾರ ಉಳಿಸಿಕೊಳ್ಳಲು ಕೈನಾಯಕರ ಕಸರತ್ತು

ಸರ್ಕಾರ ಉಳಿಸಿಕೊಳ್ಳಲು ಕೈನಾಯಕರ ಕಸರತ್ತು
ಬೆಂಗಳೂರು , ಮಂಗಳವಾರ, 28 ಮೇ 2019 (11:00 IST)
ಬೆಂಗಳೂರು : ಲೋಕಸಭಾ ಚುನಾವಣೆಯ ಬಳಿಕ ರಾಜ್ಯ ಮೈತ್ರಿ ಸರ್ಕಾರದಲ್ಲಿ ಕೋಲಾಹಲ ಸೃಷ್ಟಿಯಾಗಿದ್ದು, ಇದೀಗ ಸರ್ಕಾರವನ್ನು ಉಳಿಸಿಕೊಳ್ಳಲು ದೋಸ್ತಿಗಳು ರಿವರ್ಸ್ ಅಪರೇಶನ್ ಗೆ ಮುಂದಾಗಿದ್ದಾರೆ.



ಹೌದು. ಆಪರೆಷನ್ ಹಸ್ತಕ್ಕೆ ಚಾಲನೆ ನೀಡಲು ಕಾಂಗ್ರೆಸ್ ನಾಯಕರು ನಿರ್ಧಾರಮಾಡಿದ್ದು, ಐವರು ಬಿಜೆಪಿ ಶಾಸಕರಿಗೆ ಗಾಳ ಹಾಕಲು ದೋಸ್ತಿಗಳು ಸಿದ್ಧತೆ ನಡೆಸಿದ್ದಾರೆ. ನಿನ್ನೆ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಡಿಸಿಎಂ ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್, ಸಚಿವ ಜಮೀರ್ ಅಹಮದ್ ಮುಂತಾದವರು ಭಾಗಿಯಾಗಿದ್ದು, ಈ ತೀರ್ಮಾನ ಕೈಗೊಂಡಿದ್ದಾರೆ ಎನ್ನಲಾಗಿದೆ.

 

ಇನ್ನೊಂದು ಕಡೆ ಅಪರೇಷನ್ ಕಮಲ ಹತ್ತಿಕ್ಕಲು ಕಾಂಗ್ರೆಸ್ ಹೈಕಮಾಂಡ್ ಎಂಟ್ರಿ ಕೊಟ್ಟಿದ್ದು, ಹೈಕಮಾಂಡ್ ಸೂಚನೆಯಂತೆ ಎಐಸಿಸಿಯ ಪ್ರಧಾನ ಕಾರ್ಯದರ್ಶಿಯಾಗಿರುವ ಗುಲಾಂ ನಬಿ ಅಜಾದ್ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದಾರೆ. ಇಂದು ಸಂಜೆ ಬೆಂಗಳೂರಿಗೆ ಆಗಮಿಸಲಿರುವ ಗುಲಾಂ ನಬಿ ಅಜಾದ್ ರಾಜ್ಯ ಕಾಂಗ್ರೆಸ್ ನಾಯಕರ ಜತೆ ಸಭೆ ನಡೆಸಿ ಅತೃಪ್ತರ ಓಲೈಕೆ ಬಗ್ಗೆ ಚರ್ಚಿಸಲಿದ್ದಾರೆ ಎನ್ನಲಾಗಿದೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ತವರಿಗೆ ವಾಪಸಾದ ಡಿಕೆಶಿ ಕಣ್ಣು, ಕಿವಿ ಮುಚ್ಕೊಂಡಿರ್ತಾರಂತೆ!