Select Your Language

Notifications

webdunia
webdunia
webdunia
Sunday, 13 April 2025
webdunia

ಮೋದಿಯನ್ನು ಹಾಡಿ ಹೊಗಳುತ್ತಿರುವ ಕೈ ಕಾರ್ಯಕರ್ತರು…!

ಕಾಂಗ್ರೆಸ್
ಬೀದರ್ , ಬುಧವಾರ, 27 ಮಾರ್ಚ್ 2019 (18:36 IST)
ಕಾಂಗ್ರೆಸ್ ಪಕ್ಷದ ಕಾರ್ಯಕರ್ತರೇ ಕೈ ಪಾಳೆಯದ ಮುಖಂಡರ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದು, ಅಚ್ಚರಿಯ ಬೆಳವಣಿಗೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಹೊಗಳುತ್ತಿದ್ದಾರೆ.

ಕಾಂಗ್ರೆಸ್ ಪಕ್ಷದ ವಿರುದ್ಧ ಸ್ವಪಕ್ಷೀಯರೇ ವಾಗ್ದಾಳಿ ಮುಂದುರಿಸಿದ್ದಾರೆ.

ನಮ್ಮ ಪಕ್ಷ ಐವತ್ತು ವರ್ಷ ಆಡಳಿತ ‌ಮಾಡಿದೆ ಕೇಂದ್ರದಲ್ಲಿ ಆದರೆ ಏನು ಅಭಿವೃದ್ಧಿ ಕೆಲಸ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿರುವ ಕಾರ್ಯಕರ್ತರು, ಪ್ರಧಾನಿ ನರೇಂದ್ರ ಮೋದಿ ಒಳ್ಳೆಯ ಕೆಲಸ ಮಾಡಿದ್ದಾರೆ. ಈ ಮಾತನ್ನು ನಾನು ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಾಗಿ ಹೇಳುತ್ತಿದ್ದೇನೆ ಅಂತ ಕಾರ್ಯಕರ್ತರೊಬ್ಬರು ಹೇಳಿದ್ದಾರೆ.

ಕೇಂದ್ರದಲ್ಲಿ ಇನ್ನೊಂದು ಬಾರಿ ಮೋದಿ ನೇತೃತ್ವದ ಸರಕಾರ ಬರಬೇಕು. ಹೀಗಂತ ಬೀದರ್ ನಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹೇಳಿಕೆ ನೀಡಿದ್ದಾರೆ.

ಕಾಂಗ್ರೆಸ್ ಕಾರ್ಯಕರ್ತರು ಮೋದಿ ಬಗ್ಗೆ  ಹಾಡಿ ಹೊಗಳಿದ್ದಾರೆ. ಕೈ ಕಾರ್ಯಕರ್ತರ ಈ ನಡೆ ಕೆಪಿಸಿಸಿ ಕಾರ್ಯ ಅಧ್ಯಕ್ಷ ಈಶ್ವರ ಖಂಡ್ರೆ ತಲೆ ಬಿಸಿಗೆ ಕಾರಣವಾಗಿದೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಪೇಡಾನಗರಿ ಟಿಕೆಟ್ ಗಾಗಿ ಕೈನಲ್ಲಿ ಪೈಪೋಟಿ