Publish Date: Thu, 06 Apr 2023 (19:40 IST)
Updated Date: Thu, 06 Apr 2023 (18:02 IST)
ಕಾಂಗ್ರೆಸ್ ಇಂದು ಎರಡನೇ ಪಟ್ಟಿ ಘೋಷಣೆ ಮಾಡಿದೆ.ಕಳೆದ ಎರಡು ಮೂರುದಿನಗಳಿಂದಲೂ ದೆಹಲಿಯಲ್ಲಿ ರಾಜ್ಯನಾಯಕರು ಹಾಗೂ ಕೇಂದ್ರ ನಾಯಕರು ಟಿಕೇಟ್ ಪೈನಲ್ ಮಾಡಲು ಹರಸಾಹಸ ಪಟ್ಟಿದ್ದಾರೆ.42 ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ.ಈ ಪಟ್ಟಿಯಲ್ಲಿ ಕೆಲವು ಹಾಲಿ ಶಾಸಕರು ಕಾಯುತ್ತಾ ಇದ್ರು,ಆದರೆ ಅವರಿಗೆ ನಿರಾಸೆ ಆಗಿದೆ.ಮೊದಲ ಪಟ್ಟಿಯಲ್ಲಿ ಹೆಸರು ಪ್ರಕಟವಾಗದೇ ತೀವ್ರ ಗೊಂದಲಕ್ಕೆ ಈಡಾಗಿದ್ದ ಹಾಲಿ ಶಾಸಕರಲ್ಲಿ ಕೆಲವರು ಕಾಯಲೇಬೇಕಾಗಿದೆ.ಇವರಲ್ಲಿ ಪ್ರಮುಖರೆಂದರೆ ಪಾವಗಡ ಶಾಸಕ ವೆಂಕಟರಮಣಪ್ಪ, ಕುಂದಗೋಳ ಶಾಸಕಿ ಕುಸುಮಾ ಶಿವಳ್ಳಿ, ಹರಿಹರ ಶಾಸಕ ರಾಮಪ್ಪ, ಪುಲಕೇಶಿನಗರ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ, ಸಿದ್ದರಾಮಯ್ಯಗೆ ಟಿಕೆಟ್ ನೀಡಿದ್ದರಿಂದ ವರುಣಾದಿಂದ ಟಿಕೆಟ್ ಕೈತಪ್ಪಿದ್ದ ಡಾ. ಯತೀಂದ್ರ ಸಿದ್ದರಾಮಯ್ಯಗೂ ಎಲ್ಲಿಂದಲೂ ಟಿಕೆಟ್ ನೀಡಿಕೆ ಆಗಿಲ್ಲ.