Select Your Language

Notifications

webdunia
webdunia
webdunia
webdunia

ಪಕ್ಷಾಂತರ ಪರ್ವ; BJPಗೆ ಬಲ

Defection Festival
bangalore , ಗುರುವಾರ, 6 ಏಪ್ರಿಲ್ 2023 (17:20 IST)
ವಿಧಾನಸಭೆ ಸಮೀಪಿಸುತ್ತಿರುವ ಹಿನ್ನೆಲೆ ಪಕ್ಷಾಂತರದ ಪರ್ವ ಜೋರಾಗಿದೆ. ಗೆಲ್ಲುವ ಕನಸಿನಿಂದ ಅ ಪಕ್ಷದಿಂದ ಈ ಪಕ್ಷ, ಈ ಪಕ್ಷದಿಂದ ಅ ಪಕ್ಷಕ್ಕೆ ಅಂತ ರಾಜಕೀಯ ನಾಯಕರು ನಡೆ ಬದಲಿಸಿದ್ದಾರೆ.. ಇಂದು ಡಾ. ಸುರೇಂದ್ರ ಬಾಬು, ಲಿಂಗರಾಜು, ಮಣಿಕಂಠ, ಶಿವಮೊಗ್ಗ ಪಾಲಿಕೆ ಮಾಜಿ ಮೇಯರ್ ಏಳುಮಲೈ, ಮಾಜಿ ಸದಸ್ಯೆ ಗೌರಿ ಶ್ರೀನಾಥ್ ಸೇರಿದಂತೆ, ಆಪ್, ಕಾಂಗ್ರೆಸ್ ಹಾಗೂ ಜೆಡಿಎಸ್​ನ ಪ್ರಭಾವಿ ಮುಖಂಡರು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಶಿವಮೊಗ್ಗ ಬಿಜೆಪಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್ ಈ ಕುರಿತು ವಿವರ ನೀಡಿದರು. ಈಗಾಗಲೇ ಹಲವಾರು ಕಾರ್ಯಕ್ರಮಗಳು ಯಶಸ್ವಿಯಾಗಿವೆ. ಬೂತ್ ವಿಜಯ ಅಭಿಯಾನ, ವಿಜಯ ಸಂಕಲ್ಪ ಯಾತ್ರೆಗಳು ಯಶಸ್ವಿಯಾಗಿ ನಡೆದಿವೆ. ಸಕ್ರಿಯ ಕಾರ್ಯಕರ್ತರ ಪಡೆಯಿಂದ ಕಾರ್ಯಕ್ರಮಗಳು ಯಶಸ್ವಿಯಾಗಿವೆ. ಕಾರ್ಯಕರ್ತರು ಬಿಜಿಪಿ ಸೇರುವುದರಿಂದ ಪಕ್ಷದ ಬಲ ಮತ್ತಷ್ಟು ಹೆಚ್ಚಾಗಲಿದೆ ಎಂದು ಆಶಯ ವ್ಯಕ್ತಪಡಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಬಲ ಆಕಾಂಕ್ಷಿಗಳ `ಕೈ' ತಪ್ಪಿದ ಕ್ಷೇತ್ರಗಳು