Select Your Language

Notifications

webdunia
webdunia
webdunia
webdunia

ಮುಗಿಯದ 58 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ

Selection of candidates for 58 uncompleted constituencies
bangalore , ಗುರುವಾರ, 6 ಏಪ್ರಿಲ್ 2023 (16:56 IST)
ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಇಂದು ಎರಡನೇ ಪಟ್ಟಿ ಬಿಡುಗಡೆ ಮಾಡಿದ್ದು, ಕೆಲವು ಕ್ಷೇತ್ರಗಳಿಗೆ ಯಾವುದೇ ಅಭ್ಯರ್ಥಿಯ ಹೆಸರು ನಿಗದಿಯಾಗಿಲ್ಲ, ಹೈಕಮಾಂಡ್​​ನ ಈ ನಡೆಯಿಂದಾಗಿ ಕೆಲವು ಹಾಲಿ ಶಾಸಕರಿಗೂ ಟಿಕೆಟ್‌ ಟೆನ್ಷನ್‌ ಶುರುವಾಗಿದೆ. ಕುಂದಗೋಳ, ಪುಲಕೇಶಿನಗರ, ಹರಿಹರ, ಶಿಡ್ಲಘಟ್ಟ, ಚಿಕ್ಕಪೇಟೆ, ಬೊಮ್ಮನಹಳ್ಳಿ, ಚಿಕ್ಕಮಗಳೂರು ಸೇರಿದಂತೆ ಅನೇಕ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಘೋಷಣೆಯಾಗಿಲ್ಲ. ಇನ್ನೂ ಕೆಲವು ಕ್ಷೇತ್ರ ಮತ್ತು ಅಭ್ಯರ್ಥಿಗಳ ಹೆಸರನ್ನು ಸಸ್ಪೆನ್ಸ್‌ ಆಗಿಯೇ ಉಳಿಸಿಕೊಂಡಿರುವ ಕಾಂಗ್ರೆಸ್, ಮೇಲುಕೋಟೆಗೆ ಈ ಬಾರಿಯೂ ಅಭ್ಯರ್ಥಿಯ ಹೆಸರು ಸೂಚಿಸಿಲ್ಲ. 58 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ ಫೈನಲ್‌ ಆಗದಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವಲಸಿಗರಿಗೆ ಮಣೆ ಹಾಕಿದ ‘ಕೈ’ ಹೈಕಮಾಂಡ್