ಬೆಂಗಳೂರು: ಈ ಹಿಂದೆ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ಮೇಲೆ 40% ಕಮಿಷನ್ ಆರೋಪ ಮಾಡಿದ್ದ ಕಾಂಗ್ರೆಸ್ ಮೇಲೆಯೇ ಈಗ ಕಮಿಷನ್ ಆರೋಪ ಕೇಳಿಬಂದಿದೆ.
ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬಾರದೇ ಇರುವುದಕ್ಕೆ ಈ ಕಮಿಷನ್ ಆರೋಪವೂ ಮುಖ್ಯ ಕಾರಣವಾಗಿತ್ತು. ಕಮಿಷನ್ ಆರೋಪವನ್ನಿಟ್ಟುಕೊಂಡು ಆಗ ವಿರೋಧ ಪಕ್ಷವಾಗಿದ್ದ ಕಾಂಗ್ರೆಸ್ ಪೇಸಿಎಂ ಅಭಿಯಾನ ನಡೆಸಿತ್ತು.
ಆದರೆ ಈಗ ಕಾಂಗ್ರೆಸ್ ಸರ್ಕಾರಕ್ಕೂ ಕಮಿಷನ್ ದಂಧೆ ಆರೋಪ ತಟ್ಟಿದೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕಮಿಷನ್ ಮಿತಿ ಮೀರಿದೆ ಎಂದು ಆರೋಪಿಸಿ ಗುತ್ತಿಗೆದಾರರು ಸಿಡಿದೆದ್ದಿದ್ದಾರೆ. ಸರ್ಕಾರದ ವಿರುದ್ಧವೇ ಗಂಭೀರ ಆರೋಪ ಮಾಡಿದ್ದಾರೆ.
ಕಾಂಗ್ರೆಸ್ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆಗೆ ದೂರು ನೀಡಲು ಮುಂದಾಗಿದೆ. ಇದರ ನಡುವೆಯೇ ಎಚ್ಚೆತ್ತುಕೊಂಡ ಡಿಸಿಎಂ ಡಿಕೆ ಶಿವಕುಮಾರ್ ಗುತ್ತಿಗೆದಾರರೊಂದಿಗೆ ಇಂದು ಸಭೆ ಕರೆದಿದ್ದಾರೆ. ಸಭೆಯಲ್ಲಿ ಗುತ್ತಿಗೆದಾರರು ತಮಗೆ ಬಾಕಿಯಾಗಿರುವ ಬಿಲ್ ಕ್ಲಿಯರ್ ಆಗಬೇಕು, ಕಮಿಷನ್ ದಂಧೆ ಕಡಿಮೆಯಾಗಬೇಕು ಎಂದು ಬೇಡಿಕೆ ಮುಂದಿಡಲಿದ್ದಾರೆ. ಬಾಕಿ ಕ್ಲಿಯರ್ ಆಗದೇ ಇದ್ದಲ್ಲಿ ರಾಹುಲ್ ಗಾಂಧಿಗೆ ದೂರು ನೀಡುವುದಾಗಿ ಬೆದರಿಕೆ ಹಾಕಿದ್ದಾರೆ.