ಆರ್ ಎಸ್ ಎಸ್ ಬಗ್ಗೆ ಮಾತನಾಡುವ ನೈತಿಕ ಹಕ್ಕು ಕಾಂಗ್ರೆಸ್ ಗೆ ಇಲ್ಲ, ಆರ್ ಎಸ್ ಎಸ್ ನವರು ನಿಸ್ವಾರ್ಥದಿಂದ ಸೇವೆ ಮಾಡುವರು. ಎಂದು ಮಾಜಿ ಸಿಎಂ ಸಿದ್ದರಾಮಯ್ಯಗೆ ಬೆಳಗಾವಿಯಲ್ಲಿ ಸಚಿವ ಮುರಗೇಶ ನಿರಾಣಿ ತಿರುಗೇಟು ನೀಡಿದ್ದಾರೆ.
ಆರ್ ಎಸ್ ಎಸ್ ನವರು ಅಧಿಕಾರಕ್ಕಾಗಿ ಎಂಎಲ್ ಎ ಆಗಬೇಕು, ಎಂಪಿ ಆಗಬೇಕು ಅಂತಾ ಸಿಎಂ ಆಗುವ ಕನಸು ಕಂಡವರಲ್ಲ. ಎಲ್ಲಿ,ಯಾರಿಗೆ ಅನ್ಯಾಯ ನಡೆಯುತ್ತದೆಯೋ, ಯಾವಾಗ ಸಾರ್ವಜನಿಕರು ಕಷ್ಟದಲ್ಲಿ ಇರ್ತಾರೋ ಅಲ್ಲಿ ಗಟ್ಟಿಯಾಗಿ ನಿಂತು ಕೆಲಸ ಮಾಡಿದ್ದಾರೆ. ಅಲ್ಲದೆ ಪ್ಲಡ್ ಬಂದಾಗ ಮನೆ ಮಠ ಬಿಟ್ಟು ಆರ್ ಎಸ್ ಎಸ್ ಕಷ್ಟ ಪಟ್ಟು ಕೆಲಸ ಮಾಡಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯಗೆ ಬೆಳಗಾವಿಯಲ್ಲಿ ಸಚಿವ ಮುರಗೇಶ ನಿರಾಣಿ ಟಾಂಗ್ ಕೊಟ್ಟಿದ್ದಾರೆ.
ಇದೇ ವೇಳೆ ಬಿಜೆಪಿ ಆರ್ ಎಸ್ ಎಸ್ ಕೈಗೊಂಬೆಯಾಗಿದೆ ಅಂತಾ ಕಾಂಗ್ರೆಸ್ ಆರೋಪ ವಿಚಾರಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯಿಸಿದ ಅವರು, ನಮ್ಮ ಕುಟುಂಬದಲ್ಲಿ ನಮ್ಮ ತಾಯಿ ತಂದೆ ಮಾತು ಕೇಳುತ್ತಿದ್ದೇವೆ. ಅದು ಕೈ ಗೊಂಬೆ ಅಂತಾ ಅಲ್ಲ ಅದು ನಮ್ಮ ಕರ್ತವ್ಯ.ಆರ್ ಎಸ್ ಎಸ್ ಅಂದ್ರೆ ಅವರನ್ನು ತಾಯಿ ಸ್ಥಾನದಲ್ಲಿ ನೋಡುತ್ತೇವೆ ಎಂದು ಹೇಳಿದ್ರು.
ರಾಜ್ಯದಲ್ಲಿ ಚಡ್ಡಿವಾರ್ ವಿಚಾರಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಇರಬಹುದು, ಡಿಕೆಶಿ ಇರಬಹುದು. ಯಾರೇ ಕಾಂಗ್ರೆಸ್ ನವರು ಚಡ್ಡಿ ಬಗ್ಗೆ ಮಾತಾಡೋದು ಸೂಕ್ತ ಅಲ್ಲ ಎಂದ್ರು. ರಾಜ್ಯದ ಅಭಿವೃದ್ಧಿ ಮಾಡುವ ವಿಚಾರದಲ್ಲಿ ಸಿದ್ದರಾಮಯ್ಯ ಅಳಿಲು ಸೇವೆ ಇದೆ. ಅವರು ಮಾಡುವ ಕೆಲಸ ಇನ್ನೂ ಸಾಕಷ್ಟು ಇದೆ, ಅದರ ಕಡೆ ಗಮನ ಕೊಡಲಿ, ಆರ್ ಎಸ್ ಎಸ್ ನವರ ಬಗ್ಗೆ ಆಳವಾಗಿ ಅಭ್ಯಾಸ ಮಾಡಿದ್ರೆ ಅವರ ಮನ ಪರಿವರ್ತನೆ ಆಗುತ್ತದೆ ಎಂದ್ರು.