Publish Date: Mon, 12 Oct 2026 (16:12 IST)
Updated Date: Mon, 12 Oct 2026 (16:16 IST)
ಬೆಂಗಳೂರು: ರಾಜ್ಯದಲ್ಲಿ ಯಾವುದೇ ಕ್ಷಣದಲ್ಲಿ ವಿಧಾನಸಭಾ ಚುನಾವಣೆ ನಡೆದರೂ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸಂಪುಟದ ಸದಸ್ಯರೂ ಸೇರಿ 25 ಶಾಸಕರು ಕಾಂಗ್ರೆಸ್ ತೊರೆದು ಬಿಜೆಪಿಗೆ ಬರಲಿದ್ದಾರೆ. ಅಂತಹ ರಾಜಕೀಯ ವಾತಾವರಣ ಸೃಷ್ಟಿಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಹೇಳಿದ್ದಾರೆ.
ನಗರದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಕಳೆದ ಬಾರಿಯ ಚುನಾವಣೆಯಲ್ಲಿ ಜನ ಯಾಮಾರಿ ಯುಪಿಎಗೆ ಒಂದಷ್ಟು ಸ್ಥಾನ ನೀಡಿದ್ದರು. ಆದರೆ ಮುಂದಿನ ಬಾರಿ ಹಾಗಾಗಲು ಸಾಧ್ಯವೇ ಇಲ್ಲ. ಹಿಂದೆ ಐವತ್ತು ಅರವತ್ತು ಸಂಸದರು ಕಾಂಗ್ರೆಸ್‍ನಿಂದ ಗೆದ್ದಿದ್ದರು. ರಾಹುಲ್ ಗಾಂಧಿ ಅವರಿಂದ ಪಕ್ಷಕ್ಕೆ ಮುಂದಿನ ಬಾರಿ ಸೀಟು ಕಡಿಮೆಯಾಗಲಿದೆ ಎಂದು ಹೇಳಿದರು.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರ ಭೇಟಿಗೆ ಕಾಂಗ್ರೆಸ್ ನೇತೃತ್ವದ 'ಇಂಡಿಯಾ' ಮೈತ್ರಿಕೂಟ ಮನವಿ ಮಾಡಿದೆ. ಎಸ್‍ಐಆರ್ ವಿಷಯ ಈಗಾಗಲೇ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆಗೆ ಇರುವಾಗ ಮುಖ್ಯ ನ್ಯಾಯಮೂರ್ತಿಗಳನ್ನು ಭೇಟಿಗೆ ಕೇಳುವುದು ಕಾಂಗ್ರೆಸ್‍ಗೆ ಶೋಭೆ ತರುವುದಿಲ್ಲ ಎಂದರು. ದೇಶದಲ್ಲಿ ಒಟ್ಟಾರೆ ಅರಾಜಕತೆ ಸೃಷ್ಟಿಸಲು ಕಾಂಗ್ರೆಸ್ ಯತ್ನಿಸುತ್ತಿದೆ. ಆ ಪಕ್ಷ ಭ್ರಮನಿರಸನಗೊಂಡಿದೆ. ಬಾಂಗ್ಲಾದೇಶ ಮತ್ತು ಶ್ರೀಲಂಕಾದಲ್ಲಿ ಹೇಗೆ ಬೇರೆ ಬೇರೆ ರೀತಿ ಯುವಕರಿಂದ ಅರಾಜಕತೆ ಆಯಿತೋ ಅದೇ ರೀತಿ ರಾಜ್ಯದಲ್ಲೂ ಆಗಲಿದೆ ಎಂದು ಕಾಂಗ್ರೆಸ್ ಮುಖಂಡರು ಹೇಳಿದ್ದಾರೆ. ಹೇಗಾದರೂ ಮಾಡಿ ಈ ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಕಾಂಗ್ರೆಸ್ ಷಡ್ಯಂತ್ರ ಮತ್ತು ಪಿತೂರಿ ಮಾಡುತ್ತಿದೆ. ಇದನ್ನೆಲ್ಲ ದೇಶದ ಜನ ಒಪ್ಪಲ್ಲ ಎಂದು ನುಡಿದರು.
ಕಾಂಗ್ರೆಸ್ ಪಕ್ಷಕ್ಕೆ ಸ್ವಲ್ವವಾದರೂ ಮಾನ ಮರ್ಯಾದೆ ಇದ್ದರೆ, ತಾಖತ್ ಇದ್ದರೆ ದೇಶದ ಮತದಾರರ ವಿಶ್ವಾಸ ಗೆಲ್ಲುವ ಕೆಲಸ ಮಾಡಲಿ. ಜನರ ವಿಶ್ವಾಸ ಗಳಿಸಿ ದೇಶ ಮತ್ತು ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿ ಎಂದು ಸವಾಲು ಹಾಕಿದರು. ಅರಾಜಕತೆ ಸೃಷ್ಟಿಸಿ ಒಂದು ಸುಳ್ಳನ್ನು ನೂರು ಬಾರಿ ಹೇಳಿ ಗೊಂದಲದ ವಾತಾವರಣದಿಂದ ಏನೂ ಸಾಧನೆ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಕರ್ನಾಟಕದ ರಾಜಕಾರಣ ಇಷ್ಟೊಂದು ಕೀಳು ಮಟ್ಟಕ್ಕೆ ಎಂದೂ ಹೋಗಿರಲಿಲ್ಲ. ದೇಶದಲ್ಲಿ ರಾಜಕಾರಣಿಗಳೆಂದರೆ ಜನ ಅಸಹ್ಯ ಪಡುವಂತಾಗಿದೆ. ಇಂತಹ ಹೊತ್ತಲ್ಲಿ ಸ್ಟಿಂಗ್ ಆಪರೇಷನ್ ಮುಂತಾದವು ನಡೆದರೆ ಖಂಡಿತಾ ಒಳ್ಳೆಯದಲ್ಲ. ಕಾಂಗ್ರೆಸ್‍ನಲ್ಲಿ ಕೆಲವರು ಅಧಿಕಾರಕ್ಕಾಗಿ ಸ್ಟಿಂಗ್ ಆಪರೇಷನ್ ಮಾಡಿದ್ದಾರೆ ಎಂಬ ವಿಚಾರಗಳೂ ಚರ್ಚೆಯಲ್ಲಿವೆ. ಪ್ರತಿ ದಿನಕ್ಕೊಮೆ ಶಾಸಕರು, ಸಚಿವರು, ಮಾಜಿ ಸಿಎಂಗಳು ಸ್ಟಿಂಗ್ ಆಪರೇಷನ್ ಬಗ್ಗೆಯೇ ಮಾತನಾಡುತ್ತಾರೆ. ಮಂತ್ರಿಯಾಗಲು, ಮುಖ್ಯಮಂತ್ರಿಯಾಗಲು ಸ್ಟಿಂಗ್ ನಡೆದಿದೆಯಂತೆ. ಮುಂದಿನ ದಿನ ಎಲ್ಲವೂ ಬಹಿರಂಗವಾಗಲಿದೆ. ಇದೊಂದು ರಾಜಕಾರಣದ ವ್ಯಭಿಚಾರ. ಯಾರು ಇಂತಹ 420 ಕೆಲಸ ಮಾಡಿದ್ದಾರೆ ಅವರು ಅನುಭವಿಸುತ್ತಾರೆ ಎಂದರು.
ರಾಜ್ಯದಲ್ಲಿ ಭೀಕರ ಬರಗಾಲ ಇದೆ. ರೈತರಿಗೆ ಭಿಕ್ಷೆ ನೀಡದಂತೆ ಎರಡೂವರೆ ಸಾವಿರ ಪರಿಹಾರ ಘೋಷಣೆ ಮಾಡಲಾಗಿದೆ. ಆದರೆ ಹಣ ನೀಡಿಲ್ಲ. ಬಿ.ಎಸ್.ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಮನೆ ಕಳೆದುಕೊಂಡವರಿಗೆ ಐದು ಲಕ್ಷ ಪರಿಹಾರ ನೀಡಿದ್ದರು. ಕೇವಲ ಪಾತ್ರೆಗೆ ಹತ್ತು ಸಾವಿರ ನೀಡಿದ್ದರು. ಈ ಸರ್ಕಾರಕ್ಕೆ ಪರಿಹಾರ ಕೊಡಲು ಸಾಧ್ಯವಾಗದೇ ಸ್ಟಿಂಗ್ ಆಪರೇಷನ್ ವಿಷಯ ಮುನ್ನೆಲೆಗೆ ತಂದು ಜವಾಬ್ದಾರಿಯಿಂದ ನುಣುಚಿಕೊಳ್ಳಲು ನೋಡುತ್ತಿದೆ. ರಾಜ್ಯ ಆರ್ಥಿಕ ದಿವಾಳಿಯತ್ತ ಬಂದು ತಲುಪಿದೆ. ದಿವಾಳಿ ಆಗಿದೆ ಎಂದು ಒಪ್ಪಿಕೊಳ್ಳಲು ಸಿಎಂ ಮತ್ತು ಸರ್ಕಾರಕ್ಕೆ ಎದೆಗಾರಿಕೆ ಇಲ್ಲ. ಕೇಂದ್ರದ ಮೇಲೆ ಆರೋಪ ಮಾಡಿ ತಪ್ಪಿಸಿಕೊಳ್ಳುವುದೇ ಇವರ ಕೆಲಸ ಎಂದು ವಿವರಿಸಿದರು.
ಸರ್ಕಾರ ತೈಲ ಕಂಪನಿಗಳಿಗೆ ಬಾಕಿ ನೀಡದೆ ಸಾರಿಗೆ ಬಸ್‍ಗಳು ಡಿಪೆÇೀದಲ್ಲೇ ನಿಲ್ಲುತ್ತಿವೆ. ಈ ರಿಯಲ್ ಎಸ್ಟೇಟ್ ಸರ್ಕಾರಕ್ಕೆ ಹಣ ಇಲ್ಲದಿದ್ದರೂ ತಾಲೂಕುಗಳಲ್ಲಿ ರಿಂಗ್ ರಸ್ತೆ ಮಾಡಲು ಮುಂದಾಗಿದೆ. ಅಲ್ಲೂ ರಿಯಲ್ ಎಸ್ಟೇಟ್ ದಂಧೆ ಮಾಡಲು ನೋಡುತ್ತಿದೆ ಎಂದು ದೂರಿದರು.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ