Publish Date: Sun, 06 Jan 2019 (11:13 IST)
Updated Date: Sun, 06 Jan 2019 (11:19 IST)
ಶಿವಮೊಗ್ಗ : ಶಿವಮೊಗ್ಗ ಭದ್ರಾವತಿ ತಾಲೂಕು ಕೊಡ್ಲಿಗೇರೆ ಸಮೀಪ ಅರಣ್ಯದಲ್ಲಿ ದೇವಸ್ಥಾನ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ಅರಣ್ಯಧಿಕಾರಿಗೆ ಕಾಂಗ್ರೆಸ್ ಶಾಸಕರೊಬ್ಬರು ಅವಾಜ್ ಹಾಕಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.
ಅರಣ್ಯ ಸ್ಥಳವನ್ನು ಆಕ್ರಮಿಸಿ ದೇವಾಸ್ಥಾನ ನಿರ್ಮಾಣ ಮಾಡದಂತೆ ಅರಣ್ಯಾಧಿಕಾರಿ ನೋಟಿಸ್ ನೀಡಿದ್ದರು. ಈ ಹಿನ್ನೆಲೆಯಲ್ಲಿ ಸ್ಥಳೀಯರು ಶಾಸಕರಿಗೆ ದೂರು ನೀಡಿದ್ದಾರೆ. ಈ ವಿಚಾರಕ್ಕೆ ಭದ್ರಾವತಿ ಕ್ಷೇತ್ರದ ಶಾಸಕ ಸಂಗಮೇಶ್ ಅವರು ಅರಣ್ಯಾಧಿಕಾರಿ ಸೀನಪ್ಪ ಶೆಟ್ಟಿಗೆ ಫೋನ್ ಮಾಡಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
“ಡಿಎಫ್‍ಈ ಓಕೆ ಅಂತಿದ್ದಾರೆ. ನೀನು ಓಕೆ ಅಂತೀದ್ದಿಯಾ. ಮತ್ಯಾಕೇ ನೋಟಿಸ್ ಕೊಟ್ಟೆ..? ಒಂದು ಚದರ ಜಾಗವನ್ನಷ್ಟೇ ಬಳಕೆ ಮಾಡುತ್ತಾರೆ. ಅರ್ಜಿ ಸಹ ಕೊಟ್ಟಿದ್ದಾರೆ. ಇವತ್ತು ಪೂಜೆ ಮಾಡಿದ್ದೇವೆ. ಇನ್ಮೇಲೆ ಇಲ್ಲಿ ಯಾರು ಅಡ್ಡಪಡಿಸಬಾರದು. ಅಡ್ಡಬಂದರೆ ಕೈ-ಕಾಲು ಕಡೀತಿನಿ’’ ಎಂದು ಶಾಸಕರು ಅವಾಜ್ ಹಾಕಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.