Publish Date: Fri, 25 Jan 2019 (12:58 IST)
Updated Date: Fri, 25 Jan 2019 (13:00 IST)
ರಾಯಚೂರು : ಕಾರು ಬದಿಗಿಟ್ಟು ಬೈಕ್ ಓಡಿಸಿಕೊಂಡು ಜನರ ಸಮಸ್ಯೆಗಳನ್ನು ಆಲಿಸುವುದರ ಮೂಲಕ ಇದೀಗ ಕಾಂಗ್ರೆಸ್ ಶಾಸಕರೊಬ್ಬರು ಜನರ ಮೆಚ್ಚುಗೆ ಪಡೆದಿದ್ದಾರೆ.
ಲಿಂಗಸುಗೂರು ಕ್ಷೇತ್ರದ ಶಾಸಕ ಡಿ.ಎಸ್ ಹೂಲಿಗೇರಿ ಅವರು ಪಟ್ಟಣದಲ್ಲಿ ಬೈಕ್ ರೈಡ್ ಮಾಡಿಕೊಂಡೇ ಗಲ್ಲಿ ಗಲ್ಲಿಗಳಲ್ಲಿ ತಿರುಗಾಡಿ ಕುಡಿಯುವ ನೀರು, ರಸ್ತೆ, ಚರಂಡಿ ವ್ಯವಸ್ಥೆಗಳನ್ನ ಪರಿಶೀಲಿಸಿದಲ್ಲದೇ ಅಲ್ಲಿನ ಜನರ ಜೊತೆ ಮಾತನಾಡಿ ಸಮಸ್ಯೆಗಳ ಕುರಿತು ಮಾಹಿತಿ ಪಡೆದು ಸಮಸ್ಯೆಗಳನ್ನು ಬಗೆಹರಿಸುವಂತೆ ಭರವಸೆ ನೀಡಿದ್ದಾರೆ.
ಅಲ್ಲದೇ ಸಿಸಿ ರಸ್ತೆಗಳು (ಕಾಂಕ್ರೀಟ್ ರೋಡ್) ಇಲ್ಲದ ಬಡಾವಣೆಗಳನ್ನ ಗುರುತಿಸಿ ಮಾಹಿತಿ ಕೊಡುವಂತೆ ಶಾಸಕ ಹೂಲಿಗೇರಿ ಅವರು ಪುರಸಭೆ ಮುಖ್ಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಕಾಂಗ್ರೆಸ್ ಶಾಸಕ ಡಿ.ಎಸ್ ಹೂಲಿಗೇರಿ ಅವರು ಬೈಕ್ ರೈಡ್ ಮಾಡಿ ಪಟ್ಟಣದಲ್ಲಿ ಓಡಾಡಿರೋ ದೃಶ್ಯವನ್ನು ಸ್ಥಳೀಯರು ವಿಡಿಯೋ ಮಾಡಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.