Publish Date: Fri, 05 Jun 2020 (21:37 IST)
Updated Date: Fri, 05 Jun 2020 (21:41 IST)
ಕಾಂಗ್ರೆಸ್ ಪಕ್ಷವನ್ನು ಬಿಟ್ಟು ಬೇರೆ ಬೇರೆ ಪಕ್ಷಗಳಿಗೆ ಹೋಗಿರುವ ಘಟಾನುಘಟಿ ನಾಯಕರನ್ನು ಮಾತೃಪಕ್ಷಕ್ಕೆ ಕರೆ ತರಲು ವೇದಿಕೆ ಸಿದ್ಧಗೊಳ್ಳುತ್ತಿದೆ.
ಕೆಪಿಸಿಸಿ ನೂತನ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಈ ವಿಷಯ ತಿಳಿಸಿದ್ದು, ಪಕ್ಷ ಬಿಟ್ಟವರನ್ನ ಮತ್ತೆ ಕರೆತರಲು ಸಮಿತಿಯೊಂದನ್ನು ರಚನೆ ಮಾಡಲಾಗಿದ್ದು ಅದಕ್ಕೆ ಅಲ್ಲಂ ವೀರಭದ್ರಪ್ಪ ನೇತೃತ್ವ ವಹಿಸಲಿದ್ದಾರೆ ಎಂದಿದ್ದಾರೆ.
ಅಧಿಕಾರಕ್ಕೆ ಬರುವವರು ನಮಗೆ ಬೇಡವೇ ಬೇಡ. ಹೈಕಮಾಂಡ್ ಮೇಲೆ ನಂಬಿಕೆ, ಪಕ್ಷದ ಮೇಲೆ ವಿಶ್ವಾಸ ಇದ್ದವರು ಪಕ್ಷಕ್ಕೆ ಮರಳಿ ಸೇರ್ಪಡೆಗೊಳ್ಳಬೇಕು ಎಂದಿದ್ದಾರೆ.