ಕಾಂಗ್ರೆಸ್ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಪಕ್ಷ. ಈ ಪಕ್ಷ ಮಾತ್ರ ಎಲ್ಲ ಧರ್ಮ, ಜಾತಿಯನ್ನು ಸಮಾನವಾಗಿ ಕಾಣುತ್ತದೆ
ಬಿಜೆಪಿ ಜೆಡಿಎಸ್ಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ ಎಂದು ವಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ಧಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಬಿಜೆಪಿ ಮೇಲ್ಜಾತಿಯ ಹಾಗೂ ಶ್ರೀಮಂತರ ಪರವಾದ ಪಕ್ಷ. ನಳಿನ್ ಕುಮಾರ್ ಕಟೀಲ್ ರಸ್ತೆ ಚರಂಡಿ ಬಗ್ಗೆ ಮಾತನಾಡಬೇಡಿ. ಲವ್ ಜಿಹಾದ್ ಬಗ್ಗೆ ಮಾತನಾಡಿ ಎಂದು ಫರ್ಮಾನು ಹೊರಡಿಸಿದ್ದಾರೆ. ಧರ್ಮ ಜಾತಿ ಹಿಂದುತ್ವ ಇಟ್ಟುಕೊಂಡು ಅಧಿಕಾರಕ್ಕೆ ಬರುವುದು ಇವರ ಉದ್ದೇಶ. ಎರಡು ಲೋಕಸಭಾ ಚುನಾವಣೆಯಲ್ಲಿ ಹಿಂದುತ್ವದ ಮೇಲೆ ಅಧಿಕಾರಕ್ಕೆ ಬಂದರು. ಇವಾಗ ಹಿಂದುತ್ವ ಕೆಲಸ ಮಾಡಲ್ಲ ಎಂದು ಗೊತ್ತಾಗಿದೆ. ಹಿಂದುತ್ವ ಪ್ರಯೋಗ ಮಾಡಲು ಕಷ್ಟ ಆಗಿದೆ. ಅದಕ್ಕೆ ಹಣದ ಮೂಲಕ ಪ್ರಯೋಗ ಮಾಡ್ತಿದ್ದಾರೆ. ಲಂಚ ಹೊಡೆದ ಹಣ ಟನ್ಗಟ್ಟಲೆ ಇದೆ. ಕೋಟ್ಯಾಂತರ ಖರ್ಚು ಮಾಡುವ ಉದ್ದೇಶ ಇದೆ. ನಾಲ್ಕು ವರ್ಷದಲ್ಲಿ ಅಭಿವೃದ್ಧಿ ಇಲ್ಲ. ಲೂಟಿ ಮಾಡ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.