Publish Date: Mon, 10 Oct 2022 (13:07 IST)
Updated Date: Mon, 10 Oct 2022 (13:09 IST)
ಮಡಿಕೇರಿ : ಬಿಜೆಪಿಯವರಿಗೆ ಪಾದಯಾತ್ರೆಗಳು ಹೊಸದಲ್ಲ, ನಮ್ಮ ಹಲವು ಯಾತ್ರೆಗಳನ್ನು ಕಾಂಗ್ರೆಸ್ ಅವರು ಕಾಪಿ ಮಾಡುತ್ತಿದ್ದಾರೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಟೀಕಿಸಿದರು.
ಮಡಿಕೇರಿಯಲ್ಲಿ ಗೋ ಶಾಲೆಯ ನೂತನ ಕಟ್ಟಡವನ್ನು ಉದ್ಘಾಟನೆ ಮಾಡಿ ಮಾತಾನಾಡಿದ ಅವರು, ಕಾಂಗ್ರೆಸ್ನವರಿಗೆ ಟೀ ಅಂಗಡಿ ಹೇಗಿರುತ್ತೆ ಎನ್ನುವುದೇ ಗೊತ್ತಿರಲಿಲ್ಲ.
ಮಕ್ಕಳು ಹೇಗೆ ಬೆಳೆಯುತ್ತವೆ ಎನ್ನುವುದು ಗೊತ್ತಿರಲಿಲ್ಲ. ಅವರು ಈಗ ಎಲ್ಲವನ್ನು ನೋಡುತ್ತಿದ್ದಾರೆ ಎಂದರು. ಕಾಂಗ್ರೆಸ್ ಅವರು ವೋಟಿಗಾಗಿ ಭಾರತ್ ಜೋಡೋ ಯಾತ್ರೆ ಆರಂಭಿಸಿದ್ದಾರೆ. ಅಲ್ಲದೇ ಈ ಯಾತ್ರೆಯಲ್ಲಿ ನಿನ್ನೆ ನನ್ನ ಕ್ಷೇತ್ರದಲ್ಲಿ ವಾಲ್ಮೀಕಿ ಅವರಿಗೆ ಮಾಡಿದ ಅಪಮಾನದಿಂದಲೇ ಗೊತ್ತಾಗುತ್ತದೆ.
ವಾಲ್ಮೀಕಿ ಫೋಟೊ ಇಟ್ಟು ಕಾಯುತ್ತಿದ್ದರೆ ರಾಹುಲ್ ಗಾಂಧಿ ಅತ್ತ ತಿರುಗಿ ನೋಡಿಲ್ಲ. ಕೊನೆ ಪಕ್ಷ ರಾಜ್ಯದ ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ , ಡಿ.ಕೆ. ಶಿವಕುಮಾರ್, ಪರಮೇಶ್ವರ್ ಅವರು ತಿರುಗಿ ನೋಡಲಿಲ್ಲ ಎಂದು ಕಿಡಿಕಾರಿದರು.