Select Your Language

Notifications

webdunia
webdunia
webdunia
webdunia

ಸಚಿವ ಸ್ಥಾನ ಸಿಗುತ್ತಿದೆ ಎಂದು ನಿರೀಕ್ಷೆಯಲ್ಲಿರುವವರಿಗೆ ಶಾಕ್ ಕೊಟ್ಟ ಕಾಂಗ್ರೆಸ್ ಹೈಕಮಾಂಡ್

DK Shivakumar-Rahul Gandhi
ಬೆಂಗಳೂರು: ಸಿದ್ದರಾಮಯ್ಯಗೆ ಸಮೀಪವರ್ತಿ ಎಂದೇ ಡಿಕೆ ಶಿವಕುಮಾರ್ ಗೆ ಆಪ್ತ ಎಂಬ ಕಾರಣಕ್ಕೋ ನನಗೆ ಸಚಿವಗಿರಿ ಸಿಕ್ಕೇ ಸಿಗುತ್ತದೆ ಎಂದು ನಿರೀಕ್ಷೆಯಲ್ಲಿದ್ದವರಿಗೆ ಕಾಂಗ್ರೆಸ್ ಹೈಕಮಾಂಡ್ ಶಾಕ್ ಕೊಟ್ಟಿದೆ.

ಸಚಿವ ಸ್ಥಾನ ಹಂಚಿಕೆ ಮಾಡಲು ಕಾಂಗ್ರೆಸ್ ಹೈಕಮಾಂಡ್ ತನ್ನದೇ ಸೂತ್ರ ಅಳವಡಿಸಿಕೊಂಡಿದೆ. ಇದರಿಂದಾಗಿ ರಾಜ್ಯದ ನಾಯಕರ ಲೆಕ್ಕಾಚಾರಗಳು ತಲೆಕೆಳಗಾಗಿವೆ. ಸಚಿವ ಸ್ಥಾನ ನೀಡುವಾಗ ಇದುವರೆಗೆ ಹಿರಿಯ ನಾಯಕರು, ಪ್ರಭಾವಿ ನಾಯಕರು, ಅನುಭವಿಗಳಿಗೆ ಮಣೆ ಹಾಕಲಾಗುತ್ತಿತ್ತು.

ಆದರೆ ಹೈಕಮಾಂಡ್ ನಾಯಕರು ಮುಂಬರುವ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಹೊಸಬರಿಗೆ ಮತ್ತು ಯುವಕರಿಗೆ ಇಷ್ಟು ಅಂತ ಸಚಿವ ಸ್ಥಾನ ಫಿಕ್ಸ್ ಮಾಡಿಕೊಂಡಿದೆ. ಅದರಂತೆ ವಯಸ್ಸಿಗೆ ಅನುಗುಣವಾಗಿ ಸಚಿವ ಸ್ಥಾನ ಹಂಚಿಕೆ ಮಾಡಲಾಗುತ್ತದೆ. ಹೀಗಾಗಿ ಈ ಬಾರಿ ಆಪ್ತರು, ಹಿರಿಯರು ಎಂಬುದು ಮಾತ್ರ ಮಾನದಂಡವಾಗಲ್ಲ. ಹೊಸಬರನ್ನೂ ಸಚಿವರಾಗಿ ನೋಡಬಹುದು. ಇದೇ ಮಾನದಂಡದ ಪ್ರಕಾರ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಪ್ರತ್ಯೇಕ ಪಟ್ಟಿ ಸಿದ್ಧಪಡಿಸಿದ್ದಾರೆ. ಇದರಲ್ಲಿ ಹೈಕಮಾಂಡ್ ಅಂತಿಮವಾಗಿ ಯಾವುದನ್ನು ಆಯ್ಕೆ ಮಾಡಲಿದೆ ಎನ್ನುವುದು ಕುತೂಹಲದ ವಿಚಾರ.


Share this Story:

Follow Webdunia kannada

ಮುಂದಿನ ಸುದ್ದಿ

ತಿರುಚೆಂಗೋಡು ರಥೋತ್ಸವದಲ್ಲಿ ದೇವರ ತೇರಿಗೆ ಸಿಕ್ಕು ಪ್ರಾಣ ಕಳೆದುಕೊಂಡ ವ್ಯಕ್ತಿ: ಭೀಕರ ವಿಡಿಯೋ ಇಲ್ಲಿದೆ Video