Select Your Language

Notifications

webdunia
webdunia
webdunia
webdunia

ಮದ್ದೂರು ಗಲಾಟೆಯಲ್ಲಿ ಮತ್ತೆ ಹಿಂದೂಗಳನ್ನು ಕಡೆಗಣಿಸಿತಾ ಕಾಂಗ್ರೆಸ್ ಸರ್ಕಾರ

Siddaramaiah-DK Shivakumar

Krishnaveni K

ಮಂಡ್ಯ , ಬುಧವಾರ, 10 ಸೆಪ್ಟಂಬರ್ 2025 (10:24 IST)
ಮಂಡ್ಯ: ಮದ್ದೂರಿನಲ್ಲಿ ಗಣೇಶ ಮೆರವಣಿಗೆ ವೇಳೆ ಮುಸ್ಲಿಂ ಸಮುದಾಯದಕ್ಕೆ ಸೇರಿದ ಕೆಲವು ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದರಿಂದ ಹಿಂದೂಗಳು ಆಕ್ರೋಶಗೊಂಡು ಪ್ರತಿಭಟನೆ ನಡೆಸಿದ್ದರು. ಈ ವೇಳೆ ರಾಜ್ಯದ ಕಾಂಗ್ರೆಸ್ ಸರ್ಕಾರದ ನಾಯಕರ ಕೆಲವು ಮಾತುಗಳು ಮತ್ತೆ ಹಿಂದೂಗಳನ್ನು ಕೆರಳಿಸಿದೆ.

ಕಾಂಗ್ರೆಸ್ ಮುಸ್ಲಿಮರನ್ನೇ ಓಲೈಸುತ್ತದೆ ಎಂಬ ಅಪವಾದವಿದೆ. ಇದೀಗ ಮದ್ದೂರು ಗಲಾಟೆ ಬಳಿಕ ಗೃಹಸಚಿವ ಜಿ ಪರಮೇಶ್ವರ್ ಘಟನೆಗೆ ಹಿಂದೂ ನಾಯಕರೇ ಕಾರಣ ಎಂಬರ್ಥದಲ್ಲಿ ಹೇಳಿಕೆ ನೀಡಿದ್ದರು. ಅವರ ಹೇಳಿಕೆ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು.

ಅಂದರೆ ನಮ್ಮ ದೇವರು, ಧರ್ಮಕ್ಕೆ ಯಾರು ಏನೇ ಅಂದರೂ ನಾವು ಮಾತ್ರ ಶಾಂತಿ ಎಂದು ಸುಮ್ಮನಿರಬೇಕಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಮಸೀದಿ ಮುಂದೆ ಗುಂಪು ಕಟ್ಟಿಕೊಂಡು ಗಲಾಟೆ ಮಾಡಿದ್ದಕ್ಕೇ ಲಾಠಿ ಚಾರ್ಜ್ ಮಾಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದರು.

ಅವರ ಹೇಳಿಕೆಯೂ ಆಕ್ರೋಶಕ್ಕೆ ಕಾರಣವಾಯಿತು. ಕಳೆದ ವರ್ಷವೂ ಮಂಡ್ಯದಲ್ಲಿ ಗಣೇಶ ಮೆರವಣಿಗೆ ಗಲಾಟೆ ವೇಳೆ ಸರ್ಕಾರ ಇದೇ ರೀತಿ ನಡೆದುಕೊಂಡಿತ್ತು. ಇಂತಹದ್ದೇ ಹೇಳಿಕೆ ಬಂದಿತ್ತು. ಇದರಿಂದಾಗಿ ಕಾಂಗ್ರೆಸ್ ಹಿಂದೂ ವಿರೋಧಿ ಎಂದು  ಬಿಜೆಪಿ ವಾಗ್ದಾಳಿ ನಡೆಸುವಂತಾಗಿತ್ತು. ಈ ಬಾರಿ ಮತ್ತೆ ಅದೇ ರೀತಿ ಆಗಿದೆ. ಇದರೊಂದಿಗೆ ಕಾಂಗ್ರೆಸ್ ಮತ್ತೊಮ್ಮೆ ಹಿಂದೂ ವಿರೋಧಿ ಹಣೆಪಟ್ಟಿ ಹೊತ್ತುಕೊಂಡಂತಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಧರ್ಮಸ್ಥಳ ಕೇಸ್: ಬುರುಡೆ ಕೇಸ್ ನ ಬುಡ ಅರಿಯಲು ವಿಠಲ ಗೌಡ, ಜಯಂತ್ ಮೊಬೈಲ್ ವಶಕ್ಕೆ