Select Your Language

Notifications

webdunia
webdunia
webdunia
webdunia

ರಾಜ್ಯದಲ್ಲಿ ತಾಲಿಬಾನ್ ಸರ್ಕಾರವಿದೆ: ಪ್ರತಾಪ ಸಿಂಹ ಆಕ್ರೋಶ

ಕರ್ನಾಟಕ ಮದ್ದೂರು ಉತ್ಸವ

Sampriya

ಮದ್ದೂರು , ಸೋಮವಾರ, 8 ಸೆಪ್ಟಂಬರ್ 2025 (15:36 IST)
ಮದ್ದೂರು: ಮದ್ದೂರಿನಲ್ಲಿ ಗಣೇಶ ಮೂರ್ತಿ ವಿಸರ್ಜನೆ ವೇಳೆ ಕಲ್ಲು ತೂರಿದ ಮುಲ್ಲಾಗಳು ಯಾರೇ ಆಗಲಿ ಅವರ ವಿರುದ್ಧ ಕೂಡಲೇ ಕ್ರಮವಾಗಬೇಕು ಹಾಗೂ ಮಸೀದಿಗಳನ್ನು ಮುಚ್ಚಿಸಬೇಕು  ಎಂದು ಮಾಜಿ ಸಂಸದ ಪ್ರತಾಪ ಸಿಂಹ ಒತ್ತಾಯಿಸಿದ್ರು.

ಪಟ್ಟಣದಲ್ಲಿ ಸೋಮವಾರ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು,  ಚುನಾವಣೆ ಸಂದರ್ಭದಲ್ಲಿ ಕದಲೂರು ಉದಯ್ (ಮದ್ದೂರು ಶಾಸಕ) ಅವರಿಂದ ದುಡ್ಡು ಪಡೆದು ಮತ ಮಾರಿಕೊಂಡಿದ್ದೀರಿ, ಜೂಜು ಆಡಿಸುವವರನ್ನು ಗೆಲ್ಲಿಸಿದ್ದೀರಿ. ಅದಕ್ಕೆ ಈ ಪರಿಸ್ಥಿತಿ ಬಂದಿದೆ ಎಂದು ಆಕ್ರೋಶ ಹೊರಹಾಕಿದರು. 

ರಾಜ್ಯದಲ್ಲಿ ತಾಲಿಬಾನ್ ಆಡಳಿತ ನಡೆಸುತ್ತಿದ್ದು, ಡಿ.ಜೆ.ಹಳ್ಳಿ– ಕೆ.ಜಿ.ಹಳ್ಳಿ ಘಟನೆಯಲ್ಲಿ ಹಲವಾರು ಮುಸ್ಲಿಂ ಯುವಕರ ವಿರುದ್ಧ ದಾಖಲಾಗಿದ್ದ ಮೊಕದ್ದಮೆಯನ್ನು ಕಾಂಗ್ರೆಸ್‌ ಸರ್ಕಾರ ಹಿಂತೆಗೆದುಕೊಂಡಿದೆ. ಇದೀಗ ಪೊಲೀಸರ ಬಂದೋಬಸ್ತ್‌ ನಡುವೆಯೂ ಮದ್ದೂರಿನಲ್ಲಿ ಈ ದುರ್ಘಟನೆ ಸಂಭವಿಸಿರುವುದು ವಿಪರ್ಯಾಸ ಎಂದರು. 

ಬಂಧಿಸಲಾಗಿರುವ ಹಿಂದುತ್ವ ಕಾರ್ಯಕರ್ತರನ್ನು ಕೂಡಲೇ ಬಿಡುಗಡೆಗೊಳಿಸಬೇಕು. ಗಣೇಶ ವಿಸರ್ಜನೆ ವೇಳೆ ಇದ್ದ ಮಹಿಳೆಯರ ಮೇಲೆ ಲಾಠಿ ಚಾರ್ಜ್ ಮಾಡಿದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.


Share this Story:

Follow Webdunia kannada

ಮುಂದಿನ ಸುದ್ದಿ

ಮದ್ದೂರು ಗಣೇಶ ಗಲಾಟೆ: ದೇಶದಾದ್ಯಂತ ವೈರಲ್ ಆಯ್ತು ಈ ಒಂದು ವಿಡಿಯೋ