Select Your Language

Notifications

webdunia
webdunia
webdunia
webdunia

ಕಾಂಗ್ರೆಸ್ ಸರ್ಕಾರ ಜಮೀರ್‌ನನ್ನು ಇಟ್ಟುಕೊಂಡು ರೈತರನ್ನು ಸಂಕಷ್ಟಕ್ಕೆ ತಲ್ಲಿದೆ: ಜನಾರ್ದನ ರೆಡ್ಡಿ

Karanataka Congress Government, MLA Janardhana Reddy, Waqf Board,

Sampriya

ಕೊಪ್ಪಳ , ಶುಕ್ರವಾರ, 22 ನವೆಂಬರ್ 2024 (19:38 IST)
Photo Courtesy X
ಕೊಪ್ಪಳ: ವಕ್ಫ್‌ ಮಸೂದೆ ಮೂಲಕ ಕಾಂಗ್ರೆಸ್ ಸರ್ಕಾರ ವಕ್ಫ್ ರೈತರನ್ನು ಸಂಕಷ್ಟಕ್ಕೆ ತಲ್ಲಿದೆ. ಈ ಸರ್ಕಾರ ಜಮೀರ್ ಎನ್ನುವ '420' ಸಚಿವನನ್ನು ಇಟ್ಟುಕೊಂಡು ಎಲ್ಲಾ ಭೂಮಿ ವಶಪಡಿಸಿಕೊಳ್ಳಲು ತರಾತುರಿಯಲ್ಲಿ ಸಾವಿರಾರು ಎಕರೆಗೆ ವಕ್ಫ್ ಹೆಸರು ಸೇರಿಸಿದ್ದಾರೆ ಎಂದು   ಶಾಸಕ ಜನಾರ್ದನ ರೆಡ್ಡಿ ಕಿಡಿಕಾರಿದರು.

ಇಂದು ಕೊ‍ಪ್ಪಳದಲ್ಲಿ ಸುದ್ದಿಗಾರರೊಂದಿಗೆ ಬಿಜೆಪಿ  ಪ್ರತಿಭಟನೆ ವಿಚಾರವಾಗಿ ಮಾತನಾಡಿದ ಅವರು, ಚುನಾವಣೆಯಲ್ಲಿ ಹೊಡೆತ ಬೀಳುವ ಭಯದಲ್ಲಿ ಸಿಎಂ ಅವರು ಮೌಖಿಕವಾಗಿ ನೋಟಿಸ್ ಹಿಂಪಡೆಯುವ ಹೇಳಿಕೆ ನೀಡಿದ್ದಾರೆ. ಅದರಿಂದ ಏನೂ ಆಗಲ್ಲ, ಕೂಡಲೇ ಎಮರ್ಜೆನ್ಸಿ ಕ್ಯಾಬಿನೆಟ್ ಮೀಟಿಂಗ್ ಮಾಡಿ ರದ್ದುಗೊಳಿಸಬೇಕಿತ್ತು ಎಂದರು.

ಅಹಿಂದ ಹೆಸರು ಹೇಳಿಕೊಂಡು ಸಿಎಂ ಅಧಿಕಾರಕ್ಕೆ ಬಂದಿದ್ದಾರೆ. ಅವರಿಗೆ ವಿನಾಶಕಾಲಕ್ಕೆ ವಿಪರೀತ ಬುದ್ಧಿ ಬಂದಿದೆ. ಇದು ಕೇವಲ ಹೋರಾಟದ ಪ್ರಾರಂಭ. ಕೂಡಲೇ ಹಿಂಪಡೆಯದೆ ಹೋದಲ್ಲಿ ಪ್ರತಿಭಟನೆ ಉಗ್ರರೂಪ ಪಡೆಯುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ಪಕ್ಷಕ್ಕೆ ಸೇರಿರುವುದೇ ನನಗೆ ಸ್ಥಾನಮಾನ: ಚಲುವರಾಯಸ್ವಾಮಿ ಹೇಳಿಕೆಗೆ ಸುಮಲತಾ ಅಂಬರೀಶ್‌ ಕೌಂಟರ್‌