ಪ್ರಕಾಶ್ ರೈ ಲೆಕ್ಕಕ್ಕಿಲ್ಲ ಅಂತಂದ ಕಾಂಗ್ರೆಸ್ ಅಭ್ಯರ್ಥಿ

Webdunia
ಸೋಮವಾರ, 25 ಮಾರ್ಚ್ 2019 (12:19 IST)
ಬೆಂಗಳೂರು ಸೆಂಟ್ರಲ್ ನಲ್ಲಿ  ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಸ್ಪರ್ಧೆ ಇದೆ. ಹೀಗಂತ ಕಾಂಗ್ರೆಸ್ ಅಭ್ಯರ್ಥಿ ಹೇಳಿದ್ದಾರೆ.

ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಕಾಂಗ್ರೆಸ್  ಅಭ್ಯರ್ಥಿ ರಿಜ್ವಾನ್ ಹರ್ಷದ್ ಈ ಹೇಳಿಕೆ ನೀಡಿದ್ದು, ಬೆಂಗಳೂರು ಕೇಂದ್ರದಲ್ಲಿ ಬಿಜೆಪಿ ಸಂಸದ ಪಿ. ಸಿ. ಮೋಹನ್  ಕೊಡುಗೆ ಏನೂ ಇಲ್ಲ ಎಂದು ದೂರಿದರು.

ನಮ್ಮದು ಬಿಜೆಪಿ ವಿರುದ್ಧ  ನೇರ ಸ್ಪರ್ಧೆ. ಕಳೆದ ಐದು ವರ್ಷ ನಾನು  ಕ್ಷೇತ್ರದಲ್ಲಿ ಕೆಲಸ ಕಾರ್ಯ  ಮಾಡಿದ್ದೇನೆ.
ಬೆಂಗಳೂರು ಸೆಂಟ್ರಲ್ ಗೆ  ಡೈನಾಮಿಕ್  ಎಂ.ಪಿ.  ಬೇಕು ಎಂದ ಅವರು, ಪ್ರಕಾಶ್ ರೈ ಸ್ಪರ್ಧೆ ನನ್ನ ಮೇಲೆ ಪರಿಣಾಮ  ಆಗಲ್ಲ ಎಂದೂ ತಿಳಿಸಿದರು.

ನನಗೆ  ನಿಶ್ಚಿತವಾಗಿಯೂ ಗೆಲ್ಲೋ ವಿಶ್ವಾಸ ಇದೆ. ಇಂದು ಒಂದು ಗಂಟೆಗೆ ನಾಮಪತ್ರ ಸಲ್ಲಿಕೆ ಮಾಡುವೆ. ರೋಷನ್ ಬೇಗ್ ಕೂಡಾ ಅಭ್ಯರ್ಥಿ ಆಕಾಂಕ್ಷಿಯಾಗಿದ್ದವರು. ರೋಷನ್ ಬೇಗ್ ಆಶಿರ್ವಾದ ಪಡೆದುಕೊಳ್ಳುತ್ತೇನೆ ಎಂದರು.

ರೋಷನ್ ಬೇಗ್  ಅವರ ವಿಶ್ವಾಸ ಪಡೆದುಕೊಂಡು ಚುನಾವಣಾ ಪ್ರಚಾರ ನಡೆಸುವೆ. ದೇವೇಗೌಡರು ಎಲ್ಲಿ ನಿಂತರೂ ಅವರ ಬೆಂಬಲ ನಮಗೆ ಇದ್ದೇ ಇರುತ್ತದೆ. ಹೆಚ್.ಡಿ. ದೇವೇಗೌಡರ  ಆಶೀರ್ವಾದ ಪಡೆದುಕೊಳ್ಳುತ್ತೇನೆ ಅಂತಾನೂ ರಿಜ್ವಾನ್ ಹರ್ಷದ್ ಹೇಳಿದ್ದಾರೆ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮುಡಾ ಹಗರಣ: ತನಿಖಾ ಸ್ಥಿತಿಗತಿ ವರದಿ ಸಲ್ಲಿಸಿದ ಲೋಕಾಯುಕ್ತರು

ಬಿಹಾರ, ಉತ್ತರ ಪ್ರದೇಶ ನಡುವೆ ರಾಮ ಸೀತೆಯ ಬಾಂಧವ್ಯವಿದೆ: ಯೋಗಿ

ಸಿದ್ದರಾಮಯ್ಯ ಸರ್ಕಾರದಲ್ಲೂ ಭ್ರಷ್ಟಾಚಾರವಿದೆ: ಸಂತೋಷ್ ಹೆಗ್ಡೆ

ದೆಹಲಿ ಸ್ಫೋಟ ಪ್ರಕರಣ, ಮತ್ತೆ ತೆರೆದ ಲಾಲ್ ಕ್ವಿಲಾ ಮೆಟ್ಟೋ ನಿಲ್ದಾಣ

ಬಿಹಾರ ಮಹಾಘಟಬಂಧನ್‌ಗೆ ಹೀನಾಯ ಸೋಲು, ಲಾಲು ಕುಟುಂಬದಲ್ಲಿ ಭಾರೀ ಬೆಳವಣಿಗೆ

ಮುಂದಿನ ಸುದ್ದಿ
Show comments