Publish Date: Sun, 24 Mar 2019 (20:27 IST)
Updated Date: Sun, 24 Mar 2019 (20:28 IST)
ಸುಮಲತಾ ಅಂಬರೀಶ್ ರ ಪರ ನಿಂತ ಯುವ ಕಾಂಗ್ರೆಸ್ಸಿಗರ ಮೇಲೆ ಕ್ರಮ ಮುಂದುವರಿದಿದೆ.
ಯುವ ಕಾಂಗ್ರೆಸ್ ನ 6 ಪದಾಧಿಕಾರಿಗಳನ್ನು ಉಚ್ಛಾಟನೆ ಮಾಡಲಾಗಿದೆ.
ಯುವ ಕಾಂಗ್ರೆಸ್ಸಿನ ರಾಜ್ಯ ಕಾರ್ಯದರ್ಶಿ ಗೀತಾ ರಾಜಣ್ಣರಿಂದ ಉಚ್ಛಾಟನೆ ಮಾಡಿ ಆದೇಶ ಹೊರಡಿಸಲಾಗಿದೆ.
ಯುವ ಕಾಂಗ್ರೆಸ್ ನ ಜಿಲ್ಲಾ ಉಪಾಧ್ಯಕ್ಷ ಅರವಿಂದ್ ಕುಮಾರ್, ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಚಂದ್ರಶೇಖರ್, ನಾಗಮಂಗಲ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ ಶರತ ರಾಮಣ್ಣ, ಮಂಡ್ಯ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ವಿಜಯ್ ಕುಮಾರ್, ಮಳವಳ್ಳಿ ವಿಧಾನ ಸಭಾ ಕ್ಷೇತ್ರದ ಉಪಾಧ್ಯಕ್ಷ ಕೃಷ್ಣೇಗೌಡ, ಮಳವಳ್ಳಿ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಮಹದೇವ ಪ್ರಸಾದ್ ಅವರನ್ನು ಉಚ್ಛಾಟನೆ ಮಾಡಲಾಗಿದೆ. ಈ ಹಿಂದೆ ಮುಖಂಡ ಸಚ್ಚಿದಾನಂದ ಅವರನ್ನು ಉಚ್ಛಾಟನೆ ಮಾಡಲಾಗಿತ್ತು.