Publish Date: Sun, 24 Mar 2019 (20:52 IST)
Updated Date: Sun, 24 Mar 2019 (20:54 IST)
ಡಿಸಿಎಂ ನೇತೃತ್ವದಲ್ಲಿ ಮೈತ್ರಿ ಸಭೆ ನಡೆದಿದ್ದು, ಮಾಜಿ ಪ್ರಧಾನಿ ಕೈ ಬಲಪಡಿಸಲು ಸಭೆಯಲ್ಲಿ ಒಮ್ಮತದ ನಿರ್ಣಯಕ್ಕೆ ಬರಲಾಗಿದೆ.
ತುಮಕೂರಿನ ಮಾಜಿ ಶಾಸಕ ರಪೀಕ್ ಅಹಮದ್ ಮನೆಯಲ್ಲಿ ಸಭೆ ನಡೆದಿದ್ದು, ಡಿಸಿಎಂ ಪರಮೇಶ್ವರ್, ಜೆಡಿಎಸ್ ನ ಸಚಿವ ಶ್ರೀನಿವಾಸ್, ಮಾಜಿ ಸಚಿವ ಟಿ.ಬಿ.ಜಯಚಂದ್ರ. ಮಾಜಿ ಶಾಸಕರಾದ ಶಪೀಅಹಮದ್ ಮತ್ತಿತರ ಮುಖಂಡರು ಭಾಗಿಯಾಗಿದ್ದರು.
ಖಾಸಗಿ ಹೋಟಲ್ ಬಳಿಕ ಮನೆಗೆ ಸಭೆ ಶಿಫ್ಟ್ ಆಯಿತು. ಅಲ್ಲಿ ಮನೆಗೆ ಕಾರ್ಯಕರ್ತರಿಗೆ ನೋ ಎಂಟ್ರಿ ಇತ್ತು.
ತುಮಕೂರಿನಲ್ಲಿ ನಾಳೆ ದೇವೇಗೌಡರು ನಾಮಪತ್ರ ಸಲ್ಲಿಸುವ ಹಿನ್ನೆಲೆಯಲ್ಲಿ ಇಂದು ಸಭೆ ನಡೆಸಲಾಯಿತು. ಮೈತ್ರಿ ಪಕ್ಷದ ನಾಯಕರು ಒಗ್ಗಟ್ಟು ಪ್ರದರ್ಶಿಸಲು ತೀರ್ಮಾನ ಮಾಡಿದ್ದಾರೆ.