Select Your Language

Notifications

webdunia
webdunia
webdunia
webdunia

ನರೇಂದ್ರ ಮೋದಿಯವರ ವಿರುದ್ಧ ಕಾಂಗ್ರೆಸ್‌ ವಾಗ್ದಾಳಿ

Congress attack against Narendra Modi
bangalore , ಮಂಗಳವಾರ, 27 ಜೂನ್ 2023 (20:23 IST)
ದೇಶದ ಹಲವಡೆ ಟೊಮೆಟೊ, ಈರುಳ್ಳಿ, ಆಲೂಗಡ್ಡೆ ಬೆಲೆ ಗಗನಕ್ಕೇರಿದ್ದು, ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಕಾಂಗ್ರೆಸ್‌ ವಾಗ್ದಾಳಿ ನಡೆಸಿದೆ. ತಪ್ಪು ನೀತಿಗಳಿಂದಾಗಿ ಬೆಲೆಗಳಲ್ಲಿ ಹಠಾತ್ ಏರಿಕೆ ಕಂಡುಬ೦ದಿದ ಎಂದು ಆರೋಪಿಸಿದೆ. ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್, 'ಪ್ರಧಾನಿ ಮೋದಿಯವರು ಟೊಮೆಟೊ, ಈರುಳ್ಳಿ ಮತ್ತು ಅಲೂಗೆಡ್ಡೆ ತರಕಾರಿಗಳಿಗೆ ಪ್ರಮುಖ ಆದ್ಯತೆ ನೀಡಲಾಗುತ್ತದೆ ಎಂದು ಹೇಳಿದ್ದರು. ಆದರೆ ತಪ್ಪು ನೀತಿಗಳಿಂದಾಗಿ ಮೊದಲು ಬೀದಿಗೆ ಎಸೆಯಲಾಗುತ್ತಿದ್ದ ಟೊಮೆಟೊಗಳನ್ನು ಈಗ ಪ್ರತಿ ಕೆ.ಜಿಗೆ 1100 ರಂತೆ ಮಾರಾಟ ಮಾಡಲಾಗುತ್ತಿದೆ' ಎಂದು ಟೀಟ್ ಮೂಲಕ ಟೀಕಿಸಿದ್ದಾರೆ.
ರಾಷ್ಟ್ರ ರಾಜಧಾನಿಯಲ್ಲಿನ ಅಜಾದ್‌ಪುರ ಮಂದಿ ಸೇರಿದಂತೆ ಹಲವಾರು ಸ್ಥಳಗಳಲ್ಲಿ ಪ್ರತಿ ಕೆ.ಜಿ ಟೊಮೆಟೊವನ್ನು 180 ರಿಂದ 100 ರಂತೆ ಮಾರಾಟ ಮಾಡಲಾಗುತ್ತಿದೆ.ಉತ್ತರ ಭಾರತದ ವಿವಿಧ ಪ್ರದೇಶಗಳಲ್ಲಿ ಬಾರಿ ಮಳೆಯಿಂದಾಗಿ ಟೊಮೆಟೊ ಬೆಳೆಗಳು ಹಾನಿಗೊಳಗಾಗಿದ್ದು. ಇದರಿಂದಾಗಿ ಸಗಟು ಮಾರುಕಟ್ಟೆಯಲ್ಲಿ ಪೂರೈಕೆಯ ಲಭ್ಯತೆಯನ್ನು ಸೀಮಿತಗೊಳಲಾಗಿದೆ ಎಂದು ಸಗಟು ವ್ಯಾಪಾರಿಗಳ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಮ್ಮ ಸರ್ಕಾರ ಇದ್ದಾಗ ಕೆಂಪೇಗೌಡ ಜಯಂತಿ ಆಚರಣೆ ಆರಂಭ ಮಾಡಿದ್ದೆವು-ಸಿಎಂ