ಇಂದು ಕೆಂಪೇಗೌಡರ ಜಯಂತಿ ಹಿನ್ನಲೆ ವಿಧಾನಸೌಧದ ಮುಂಭಾಗ ಸಿಎಂ ಸಿದ್ದರಾಮಯ್ಯ ಕೆಂಪೇಗೌಡ ಜಯಂತಿಯನ್ನು ಆಚರಿಸಿದ್ರು.ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ ಕೆಂಪೇಗೌಡ ಜಯಂತಿಯನ್ನು ಎಲ್ಲಾ 31 ಜಿಲ್ಲೆಗಳಲ್ಲಿ ಆಚರಿಸುತ್ತಿದ್ದೆವೆ.5 ದಿಕ್ಕುಗಳಿಂದ ಜ್ಯೋತಿ ತರಲಾಗಿದೆ.
ನಮ್ಮ ಸರ್ಕಾರ ಇದ್ದಾಗ ಕೆಂಪೇಗೌಡ ಜಯಂತಿ ಆಚರಣೆ ಆರಂಭ ಮಾಡಿದ್ದೆವು.ಅದಕ್ಕೂ ಮುಂಚೆ ಸರ್ಕಾರದ ವತಿಯಿಂದ ಆಚರಣೆ ಆಗ್ತಿರಲಿಲ್ಲ.ಕೆಂಪೇಗೌಡ ಪ್ರಾಧಿಕಾರವನ್ನು ರಚನೆ ಮಾಡಿದ್ದು ನಾವು.ಬೆಂಗಳೂರು ಏರ್ಪೋರ್ಟ್ ಗೆ ಕೆಂಪೇಗೌಡರ ಹೆಸರನ್ನ ಇಟ್ಟಿದ್ದು ನಾವೇ.ಬೆಂಗಳೂರು ಅಭಿವೃದ್ಧಿ ಆಗಬೇಕಾದ್ರೆ ಕೆಂಪೇಗೌಡರ ಅಡಿಪಾಯ ಹಾಕಿದ್ರು.ಆ ಕಾಲದಲ್ಲೇ ಎಲ್ಲಾ ಜನಾಂಗಕ್ಕೆ ಪೇಟೆ ಮಾಡಿದ್ರು.ಬೆಂಗಳೂರು ಬೆಳೆದಿರೋದಕ್ಕೆ ಅವರ ದೂರದೃಷ್ಟಿ ಕಾರಣ.ಅವರಿಂದ ನಮಗೆ ಸ್ಪೂರ್ತಿ ಪಡೆಯಬೇಕಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ರು.ರಾಜ್ಯದ ಅಹಾರ ಧಾನ್ಯಗಳ ಬೆಲೆ ಏರಿಕೆ ವಿಚಾರವಾಗಿ ಅದನ್ನ ಮಾಡಬೇಕಾದವ್ರು ಯಾರು?ಕೇಂದ್ರ ಸರ್ಕಾರ ಅಲ್ವಾ?We are Looking to it ಎಂದ ಸಿದ್ದರಾಮಯ್ಯ ಹೇಳಿದ್ರು.