Webdunia - Bharat's app for daily news and videos

Install App

"ಸಲಗ" "ರಿಯಲ್ ಎಸ್ಟೇಟ್" ಚಿತ್ರತಂಡಗಳು ಪೊಲೀಸರಿಗೆ ನೀಡಿದ್ದ ದೂರು ಪ್ರತಿ ದೂರು ಸಂಧಾನದಲ್ಲಿ ಅಂತ್ಯ

Webdunia
ಗುರುವಾರ, 21 ಅಕ್ಟೋಬರ್ 2021 (20:53 IST)
ಬೆಂಗಳೂರು: ಗಾಂಧಿನಗರದ ಮುಖ್ಯ ಚಿತ್ರಮಂದಿರಗಳಲ್ಲಿ ಒಂದಾದ ತ್ರಿವೇಣಿ ಚಿತ್ರಮಂದಿರದಲ್ಲಿ ಸಿನಿಮಾ ರಿಲೀಸ್​ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಸಲಗ ಮತ್ತು ರಿಯಲ್​ ಎಸ್ಟೇಟ್​ ಚಿತ್ರ ತಾಣದ ನಡುವೆ ಕಿತ್ತಾಟ ತಾರಕೇರಿತ್ತು. ಇದೀಗ  ದುನಿಯಾ ವಿಜಯ್​ ನಟನೆಯ ಸಲಗ ಚಿತ್ರ ತ್ರಿವೇಣಿ ಚಿತ್ರಮಂದಿರಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಅದೇ ಥಿಯೇಟರ್​ನಲ್ಲಿ ರಿಯಲ್​ ಎಸ್ಟೇಟ್​ ಚಿತ್ರವನ್ನು ಬಿಡುಗಡೆ ಮಾಡಲು ನಿರ್ಮಾಪಕ ರಾಮಕೃಷ್ಣಪ್ಪ ಮುಂದಾಗಿದ್ದರು. ಆ ಕಾರಣಕ್ಕೆ ಎರಡೂ ಚಿತ್ರತಂಡಗಳ ನಡುವೆ ವೈಮನಸ್ಸಿಗೆ ಕಾರಣವಾಗಿತ್ತು. ಈ ಕುರಿತು ಬುಧವಾರ ಪೊಲೀಸ್ ಆಯುಕ್ತರ ಕಚೇರಿಗೆ ದೂರು ಸಲ್ಲಿಸಲಾಗಿತ್ತು ಮತ್ತು ದೂರನ್ನು ಉಪ್ಪಾರಪೇಟೆ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿತ್ತು. ಆದರೆ ಇಂದು ಉಭಯ ಚಿತ್ರ ತಂಡಗಳು ಪೋಲೀಸರ ಸಮ್ಮುಖದಲ್ಲಿ  ಕಾಂಪ್ರಮೈಸ್ ಮಾಡಿಕೊಂಡಿವೆ. 
 
ಪೊಲೀಸ್​ ಠಾಣೆಯಲ್ಲಿ ಸಂಧಾನ ಮಾಡಿಕೊಳ್ಳಲಾಗಿದ್ದು ಗಾಂಧಿನಗರದಲ್ಲಿ ಷಡ್ಯಂತ್ರ ಮಾಡುವವರಿಂದ ಈ ರೀತಿ ಸಮಸ್ಯೆ ಆಯಿತು ಎಂದು ಎರಡೂ ಚಿತ್ರತಂಡದವರು ಹೇಳಿದ್ದಾರೆ. ಈ ಬಗ್ಗೆ ಮಾತನಾಡಿರುವ ದುನಿಯಾ ವಿಜಯ್​ ಹೀರೋ ಆಗುತ್ತಿರುವ ರಾಮಕೃಷ್ಣಪ್ಪ ಅವರ ಮಗನಿಗೆ ಒಳ್ಳೆಯದಾಗಲಿ. ಗಾಂಧಿನಗರದಲ್ಲಿ ಕೆಲವರು ಷಡ್ಯಂತ್ರ ಮಾಡಿ ನಮ್ಮ ಮಧ್ಯೆ ತಂದಿಡುತ್ತಾರೆ ಹೇಳಿದ್ದಾರೆ. 
 
ನಾವಿಬ್ಬರು ಕಿತ್ತಾಡಿಕೊಂಡರೆ ಮೂರನೆಯವರು ಎಂಟ್ರಿ ನೀಡುತ್ತಾರೆ. ಅದಕ್ಕೆ ನಾವು ಅವಕಾಶ ಕೊಡುವುದಿಲ್ಲ. ಯಾವುದೇ ಸಮಸ್ಯೆಯನ್ನು ಚಿಕ್ಕದಾಗಿರುವಾಗಲೇ ಪರಿಹರಿಸಿಕೊಳ್ಳಬೇಕು ಎಂದು ರಿಯಲ್​ ಎಸ್ಟೇಟ್​ ಚಿತ್ರದ ನಿರ್ಮಾಪಕ ರಾಮಕೃಷ್ಣಪ್ಪ ತಿಳಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಯೂರಿಯಾ ಕೊರತೆ ವಿಚಾರದಲ್ಲಿ ಬಿಜೆಪಿಗೆ ಸವಾಲೆಸೆದ ಕೃಷಿ ಸಚಿವ ಚಲುವರಾಯಸ್ವಾಮಿ

ಬ್ಯಾಂಕಾಕ್‌ನ ಮಾರುಕಟ್ಟೆಯಲ್ಲಿ ಗುಂಡಿನ ದಾಳಿ: ದಾಳಿಕೋರ ಸೇರಿ 6 ಮಂದಿ ಸಾವು

ಬಿಜೆಪಿ ರಾಜಾಧ್ಯಕ್ಷ ನೇಮಕ ವಿಳಂಬದ ಹಿಂದಿನ ಕಾರಣ ಬಿಚ್ಚಿಟ್ಟ ಶಾಸಕ ಬಸನಗೌಡ ಪಾಟೀಲ್

ಶೋಷಿತರನ್ನು ಮತಬ್ಯಾಂಕ್ ಮಾಡಿ ವಂಚಿಸುತ್ತ ಬಂದ ಕಾಂಗ್ರೆಸ್ ಪಕ್ಷ: ವಿಜಯೇಂದ್ರ

Video: ಆಪರೇಷನ್ ಸಿಂಧೂರ್ ಚರ್ಚೆ ವೇಳೆ ಸಂಸತ್ತಿನಲ್ಲಿ ರಾಜನಾಥ್ ಸಿಂಗ್, ರಾಹುಲ್ ಗಾಂಧಿ ವಾಗ್ಯುದ್ಧ

ಮುಂದಿನ ಸುದ್ದಿ
Show comments